ಹಾಪುರ್: ಇನ್ನುಮುಂದೆ ಹೆಣ್ಣುಮಕ್ಕಳನ್ನು ಅವರ ಸ್ನೇಹಿತರ ಮನೆಗೆ ಕಳುಹಿಸಲು ಕೂಡ ಪೋಷಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 14 ವರ್ಷದ ಬಾಲಕಿ ಮೇಲೆ ಆಕೆಯ ಸ್ನೇಹಿತೆಯ ತಂದೆ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಹಾಪುರದಲ್ಲಿ ನಡೆದಿದೆ. ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳನ್ನು ಸ್ನೇಹಿತೆ ತನ್ನ ಮನೆಗೆ ಆಹ್ವಾನಿಸಿದ್ದಳು, ಬಳಿಕ ಆತನ ತಂದೆ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಯಲು ಕೊಟ್ಟು ಬಳಿಕ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾರೆ.
ಸ್ನೇಹಿತೆಯ ತಂದೆ ಮತ್ತು ಇತರ ಇಬ್ಬರು ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಶಂಕಿತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. 12 ದಿನಗಳಿಂದ ಕಾಣೆಯಾಗಿದ್ದ ಬಾಲಕಿ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ದೂರಿನ ಪ್ರಕಾರ, ನವೆಂಬರ್ 13 ರಿಂದ ನವೆಂಬರ್ 25 ರವರೆಗೆ ಬಾಲಕಿ ಕಾಣೆಯಾಗಿದ್ದಳು. ಆಕೆಯ ಕುಟುಂಬವು ಹತ್ತಿರದ ಪ್ರದೇಶಗಳಲ್ಲಿ ಆಕೆಗಾಗಿ ಹುಡುಕಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಮರುದಿನ, ಅವರು ಪಿಲ್ಖುವಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ನವೆಂಬರ್ 25 ರಂದು, ಗಾಂಧಿ ಬಜಾರ್‌ನಲ್ಲಿರುವ ಮನೆಯೊಳಗೆ ಬಾಲಕಿಯೊಬ್ಬಳು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
For More Updates Join our WhatsApp Group :




