ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

ವಾಷಿಂಗ್ಟನ್‌: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಅಮೆರಿಕ(USA) ಸಿರಿಯಾದ (Syria) ಮೇಲೆ ವೈಮಾನಿಕ ದಾಳಿ (Airstrikes) ನಡೆಸಿದೆ.

ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ (Bashar al-Assad) ಅವರ ಆಡಳಿತ ಕೊನೆಗೊಂಡ ಬೆನ್ನಲ್ಲೇ ಅಮೆರಿಕ ಐಸಿಸ್‌ (ISIS) ಉಗ್ರ ಸಂಘಟನೆಯ ನೆಲೆಯ ಮೇಲೆ ದಾಳಿ ನಡೆಸಿದೆ. ಮಧ್ಯ ಸಿರಿಯಾದಲ್ಲಿರುವ 75ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

ಸರ್ವಾಧಿಕಾರಿ ಅಸ್ಸಾದ್‌ ದೇಶ ತೊರೆದ ನಂತರ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಉಗ್ರರು ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಘಟನೆ ವಶಪಡಿಸಿಕೊಂಡರೂ ಅಲ್ಲಿ ಐಸಿಸ್‌ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಐಸಿಸ್‌ ಉಗ್ರರು ಚಿಗುರಿ ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ.

ಪೂರ್ವ ಸಿರಿಯಾದಲ್ಲಿ ಅಮೆರಿಕ ಸುಮಾರು 900 ಪಡೆಗಳನ್ನು ಹೊಂದಿದೆ. ಈ ಸೈನಿಕರು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿ, ಸಿರಿಯಾದಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಲಾಭವನ್ನು ಪಡೆಯಲು ಐಸಿಸ್‌ ಪ್ರಯತ್ನಿಸುತ್ತಿದೆ. ಐಸಿಸ್‌ ಮೇಲೆ ಅಮೆರಿಕ ಕಣ್ಣಿಟ್ಟು ಅವರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

ಅಸ್ಸಾದ್ ಅಸ್ಸಾಂ ಆಡಳಿತದ ಪತನದಿಂದ ಜನತೆಗೆ ನ್ಯಾಯ ಸಿಕ್ಕಿದೆ. ಇದು ಸಿರಿಯಾದಲ್ಲಿ ದೀರ್ಘಕಾಲದಿಂದ ಬಳಲುತ್ತಿರುವ ಜನರಿಗೆ ಸಿಕ್ಕಿದ ಐತಿಹಾಸಿಕ ಕ್ಷಣ ಎಂದು ಹೇಳಿದರು.

ಇಸ್ರೇಲ್‌ನಿಂದಲೂ ದಾಳಿ:

ಇನ್ನೊಂದು ಕಡೆ ಇಸ್ರೇಲ್‌ ಸಿರಿಯಾದ ಮೇಲೆ ವಾಯು ದಾಳಿ ನಡೆಸಿದೆ. ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ಕಸ್ಟಮ್ಸ್‌ನ ಕಚೇರಿಗಳನ್ನು ಒಳಗೊಂಡ ಕಟ್ಟಡದ ಮೇಲೆ ದಾಳಿ ನಡೆದಿದೆ. ಇರಾನ್‌ನ ವಿಜ್ಞಾನಿಗಳು ಈ ಸಂಕೀರ್ಣದಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ಇಸ್ರೇಲ್‌ ಈ ಹಿಂದೆ ಹೇಳಿಕೊಂಡಿತ್ತು.

Leave a Reply

Your email address will not be published. Required fields are marked *