ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಇಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಧಾರ್ಮಿಕ ಅಚರಣೆಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು.
ಬಿಜೆಪಿಯ ವೇದವ್ಯಾಸ್ ಕಾಮತ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ಎತ್ತಿದ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಉತ್ತರಿಸಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಜನರ ಭಾವನೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ ವಿರೋಧ ಪಕ್ಷದ ನಾಯಕರು ಹೇಳಿದರೆ ಸಾಕಿತ್ತು, ಅದರೆ ಅವರು ಅದನ್ನ ಬಿಟ್ಟು ಬೇರೆ ಏನೇನೋ ಮಾತಾಡುತ್ತಾರೆ, ಸರ್ಕಾರ ಯಾವುದೇ ಆಗಿರಲಿ, ಕಾನೂನನ್ನು ಪಾಲಿಸಲೇ ಬೇಕು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಇದೆಲ್ಲ ಆಗುತ್ತಿರೋದು ಅಂದರೆ ಹೇಗೆ? ಎಂದರು.
ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ಅಶ್ವಥ್ ನಾರಾಯಣ ಹೀಗೆಲ್ಲ ಮಾತಾಡಬಾರದು, ಅವರಿಗೆ ಕೂಗಾಡೋದು ಮಾತ್ರ ಇಷ್ಟ ಅಂತ ಕಾಣುತ್ತೆ ಅಂತ ಸಚಿವ ಹೇಳಿದರು.
For More Updates Join our WhatsApp Group :