ಉತ್ತರ ಪ್ರದೇಶ || ಅಪಘಾತ ಮಾಡಿ ಕಾರಿನಲ್ಲಿ ಬೈಕ್ ಸವಾರನನ್ನು 30ಕಿ.ಮೀ ಎಳೆದೊಯ್ದ ಸರ್ಕಾರಿ ನೌಕರ

ಉತ್ತರ ಪ್ರದೇಶ || ಅಪಘಾತ ಮಾಡಿ ಕಾರಿನಲ್ಲಿ ಬೈಕ್ ಸವಾರನನ್ನು 30ಕಿ.ಮೀ ಎಳೆದೊಯ್ದ ಸರ್ಕಾರಿ ನೌಕರ

ಉತ್ತರ ಪ್ರದೇಶದಲ್ಲಿ : ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ, ಸರ್ಕಾರಿ ನೌಕರರೊಬ್ಬರು ಬೈಕ್ಗೆ ಡಿಕ್ಕಿ ಹೊಡೆದು ಬೈಕ್ ಸವಾರನನ್ನು ಕಾರಿನಲ್ಲಿ 30 ಕಿ.ಮೀ ಎಳೆದೊಯ್ದಿರುವ ಘಟನೆ ನಡೆದಿದೆ. ಪಯಾಗ್ಪುರ್ ಪೊಲಿಸ್ ಠಾಣೆ ವ್ಯಾಪ್ತಿಯ ಕೃಷ್ಣ ನಗರ ಕಾಲೊನಿಯಲ್ಲಿ ಹಲ್ದಾರ್ ವಾಸವಾಗಿದ್ದರು. ಆದರೆ ಅಪಘಾತವಾಗಿರುವ ಬಗ್ಗೆ ತಿಳಿಯದೇ ಇರುವುದು ಆಶ್ಚರ್ಯ ಮೂಡಿಸಿದೆ. ಟೋಲ್ ಪ್ಲಾಜಾ ಸೇರದಂತೆ ಎಲ್ಲೆಡೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಎಫ್ಐಆರ್ ದಾಖಲಿಸಲಾಗಿದೆ.

ಬೈಕ್ಗೆ ಡಿಕ್ಕಿ ಹೊಡೆದು ಸವಾರನನ್ನು ಸರ್ಕಾರಿ ನೌಕರರೊಬ್ಬರು ಕಾರಿನಲ್ಲಿ 30 ಕಿ.ಮೀ ಎಳದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ. ಅವರು ತಮ್ಮ ಕಚೇರಿಗೆ ತಲುಪಿದಾಗ ಅಲ್ಲಿದ್ದವರು ಅವರ ಕಾರಿನೆದುರು ಶವವನ್ನು ಕಂಡಿದ್ದಾರೆ, ಆದರೆ ಆ ವ್ಯಕ್ತಿ ಮಾತ್ರ ತನಗೆ ಇದ್ಯಾವುದೂ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ. ಅಪಘಾತ ನಡೆದ ಸ್ಥಳದಿಂದ 30 ಕಿ.ಮೀ ದೂರದಲ್ಲಿರುವ ತಹಸಿಲ್ ಕಚೇರಿಗೆ ವಾಹನ ತಲುಪಿದಾಗ ಕಾರಿನ ಕೆಳಗೆ ನರೇಂದ್ರ ಕುಮಾರ್ ಹಲ್ದಾರ್ ಎಂದು ಗುರುತಿಸಲಾದ ವ್ಯಕ್ತಿಯ ಶವ ಇತ್ತು. ಚಾಲಕ ಕಾರನ್ನು ರಿವರ್ಸ್ ತೆಗೆಯುವಾಗ ಶವ ಕಂಡಿದೆ.

ಸರ್ಕಾರಿ ವಾಹನದಲ್ಲಿದ್ದಾಗಲೇ ಅಪಘಾತ ಮಾಡಿದ್ದು, ನಾಯಬ್ ತಹಸೀಲ್ದಾರ್ನನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಕಚೇರಿಯ ಕೆಲಸಗಳಿಗಾಗಿ ನಾಯಬ್ ತಹಸೀಲ್ದಾರ್ ಶೈಲೇಶ್ ಕುಮಾರ್ ಅವಸ್ಥಿ ಸರ್ಕಾರಿ ಕಾರು ತೆಗೆದುಕೊಂಡು ಹೋಗಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಹೇಳಿದ್ದಾರೆ.

ಆದರೆ ಅಪಘಾತವಾಗಿದ್ದಾಗಲೀ ಶವ ಕಾರಿನ ಕೆಳಗೆ ಹೇಗೆ ಬಂತು ಎಂಬುದರ ಕುರಿತು ಯಾವುದೇ ಮಾಹಿತಿ ಶೈಲೇಶ್ಗೆ ಇಲ್ಲ. ಗುರುವಾರ ಅಪಘಾತವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು, ಆದರೆ ಪೊಲೀಸರು ಅಲ್ಲಿಗೆ ಹೋದಾಗ ಸ್ಥಳದಲ್ಲಿ ಬೈಕ್ ಹಾಗೂ ಚಪ್ಪಲಿ ಮಾತ್ರ ಇತ್ತು ವ್ಯಕ್ತಿ ಕಂಡುಬರಲಿಲ್ಲ.

ಪೊಲೀಸರ ತಂಡವು ರಸ್ತೆಯಲ್ಲಿ ರಕ್ತದ ಗುರುತುಗಳನ್ನು ಕಂಡುಕೊಂಡರು, ವಾಹನದ ಕೆಳಗೆ ಶವ ಸಿಲುಕಿರಬಹುದು ಎಂದು ಅಂದಾಜಿಸಿದರು. ಅಕ್ಕಪಕ್ಕದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಯಿತು.

ಪಯಾಗ್ಪುರ್ ಪೊಲಿಸ್ ಠಾಣೆ ವ್ಯಾಪ್ತಿಯ ಕೃಷ್ಣ ನಗರ ಕಾಲೊನಿಯಲ್ಲಿ ಹಲ್ದಾರ್ ವಾಸವಾಗಿದ್ದರು. ಆದರೆ ಅಪಘಾತವಾಗಿರುವ ಬಗ್ಗೆ ತಿಳಿಯದೇ ಇರುವುದು ಆಶ್ಚರ್ಯ ಮೂಡಿಸಿದೆ. ಟೋಲ್ ಪ್ಲಾಜಾ ಸೇರದಂತೆ ಎಲ್ಲೆಡೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಎಫ್ಐಆರ್ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *