Sunjay Kapur 10 ಸಾವಿರ ಕೋಟಿ ಆಸ್ತಿ ಮೇಲೆ ಮೂವರು ಪತ್ನಿಯರ ಕಣ್ಣು.!

Sunjay Kapur 10 ಸಾವಿರ ಕೋಟಿ ಆಸ್ತಿ ಮೇಲೆ ಮೂವರು ಪತ್ನಿಯರ ಕಣ್ಣು.!

ಸಂಜಯ್ ಕಪೂರ್ ಅವರ ಅಕಾಲಿಕ ನಿಧನದ ನಂತರ, ಅವರ 10,300 ಕೋಟಿ ರೂ. ಆಸ್ತಿಯ ಹಂಚಿಕೆಯ ವಿವಾದ ಭುಗಿಲೆದ್ದಿದೆ. ಕರಿಷ್ಮಾ ಕಪೂರ್ ಸೇರಿದಂತೆ ಅವರ ಮೂವರು ಪತ್ನಿಯರು ತಮ್ಮ ಹಕ್ಕುಗಳನ್ನು ಒತ್ತಾಯಿಸುತ್ತಿದ್ದಾರೆ. ಕರಿಷ್ಮಾ ಅವರು ತಮ್ಮ ಮಕ್ಕಳ ಪರವಾಗಿ ಆಸ್ತಿಯಲ್ಲಿ ಪಾಲು ಪಡೆಯಲು ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿವಾದದಿಂದ ಸಂಜಯ್ ಕಪೂರ್ ಅವರ ಕುಟುಂಬದಲ್ಲಿ ಭಾರಿ ಅಶಾಂತಿ ಉಂಟಾಗಿದೆ.

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಕಳೆದ ತಿಂಗಳು ಪೋಲೋ ಆಡುವಾಗ ಹೃದಯಾಘಾತದಿಂದ ನಿಧನರಾದರು.  ಅವರು ಜೇನು ನೊಣ ನುಂಗಿದ್ದರಿಂದ ಈ ರೀತಿ ಆಯಿತು ಎನ್ನಲಾಗಿದೆ. ಅವರಿಗೆ 53ನೇ ವಯಸ್ಸಾಗಿತ್ತು. ಸಂಜಯ್ ಅವರ ಮರಣದ ನಂತರ, ಅವರ ತಾಯಿ ಅನುಮಾನ ವ್ಯಕ್ತಪಡಿಸಿದರು. ಈಗ, ಸಂಜಯ್ ಕಪೂರ್ ಅವರ ಮರಣದ ನಂತರ, ಅವರ ಸಂಪತ್ತಿನ ಬಗ್ಗೆ ದೊಡ್ಡ ವಿವಾದವೊಂದು ಉದ್ಭವಿಸಿದೆ. ಸಂಜಯ್ ಕಪೂರ್ ಅವರ 10,300 ಸಾವಿರ ಕೋಟಿ ಸಂಪತ್ತಿನ ಮಾಲೀಕತ್ವವನ್ನು ಯಾರು ಪಡೆಯುತ್ತಾರೆ ಎಂಬ ವಿವಾದ ನಡೆಯುತ್ತಿರುವಾಗ, ಅವರ ಮೂವರು ಪತ್ನಿಯರು ಇದಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚ್ದೇವ್ ಈಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಹೆಸರನ್ನು ಪ್ರಿಯಾ ಸಚ್ದೇವ್ ಕಪೂರ್ನಿಂದ ಪ್ರಿಯಾ ಸಂಜಯ್ ಕಪೂರ್ ಎಂದು ಬದಲಾಯಿಸಿಕೊಂಡಿದ್ದಾರೆ. ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹತಾನಿ ಕೂಡ ಆಸ್ತಿ ವಿವಾದಕ್ಕೆ ಧುಮುಕಿದ್ದಾರೆ. ಅಷ್ಟೇ ಅಲ್ಲ, ಸಂಜಯ್ ಕಪೂರ್ ಅವರ ಎರಡನೇ ಪತ್ನಿ ಮತ್ತು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಕೂಡ ಆಸ್ತಿ ವಿವಾದದಲ್ಲಿ ಸಿಲುಕಿ ತಮ್ಮ ಇಬ್ಬರು ಮಕ್ಕಳೊಂದಿಗೆ ದೆಹಲಿಗೆ ತೆರಳಿದ್ದಾರೆ.

ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಸಚ್ದೇವ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಲ್ಲಿ, ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೋನಾ ಕಾಮ್ಸ್ಟಾರ್ ಎಂದು ಉಲ್ಲೇಖಿಸಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮೂವರು ಪತ್ನಿಯರು ಸಂಜಯ್ ಕಪೂರ್ ಅವರ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಏತನ್ಮಧ್ಯೆ, ಸಂಜಯ್ ಕಪೂರ್ ಅವರ ತಾಯಿ ಕೂಡ ದೊಡ್ಡ ಆರೋಪ ಮಾಡಿದ್ದರು. ಇದು ಸಹಜ ಸಾವಲ್ಲ ಕೊಲೆ ಎಂದಿದ್ದರು.

Leave a Reply

Your email address will not be published. Required fields are marked *