ನೆಲಮಂಗಲ: ರಾಜಕೀಯ ನಿವೃತ್ತಿ ಕುರಿತ ವರದಿಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.ಸೋಮಣ್ಣ ಅವರ ಹೇಳಿಕೆ “ನಾನು ಅನಿರೀಕ್ಷಿತವಾಗಿ ತುಮಕೂರಿಗೆ ಹೋದವನು. ಕೇಂದ್ರ ನಾಯಕರ ಸೂಚನೆಯ ಮೇರೆಗೆ ಅಲ್ಲಿ ಸ್ಪರ್ಧಿಸಿದೆ,” ಎಂದು ಸೋಮಣ್ಣ ಹೇಳಿದರು.
“ಅಲ್ಲಿ 50 ವರ್ಷಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು 5 ವರ್ಷಗಳಲ್ಲಿ ಮಾಡುವೆ. ಕಳೆದೊಂದು ವರ್ಷದಿಂದ ಅದಕ್ಕೆ ಬೇಕಾದ ಸಿದ್ಧತೆ ನಡೆದಿದೆ,” ಎಂದರು. “ನಾನು ಹೇಳಿದ್ದು ಇಷ್ಟೇ – ಮುಂದಿನ ಬಾರಿ ತುಮಕೂರಿನಿಂದ ಸ್ಪರ್ಧಿಸುವುದಿಲ್ಲ. ಆದರೆ ರಾಜಕೀಯ ನಿವೃತ್ತಿ ಬಗ್ಗೆ ಯಾವ ಮಾತನ್ನೂ ನಾನು ಹೇಳಿಲ್ಲ,” ಎಂದು ಸ್ಪಷ್ಟನೆ ನೀಡಿದರು.
For More Updates Join our WhatsApp Group :




