ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಡೆದ ಹೃದಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದರ್ಶನ್ ಅವರ ಬಂಧನದಿಂದಾಗಿ ಅವರು ಎಷ್ಟು ದುಃಖಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹೊರಗೆ ಇದ್ದ ಅವರು ಮತ್ತೆ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಮನಸ್ಸು ಒಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ನಟ ದರ್ಶನ್ ಮೊದಲ ಬಾರಿ ಬಂಧನದ ಬಳಿಕವೂ ಸೈಲೆಂಟ್ ಆಗಿಯೇ ಇದ್ದರು ವಿಜಯಲಕ್ಷ್ಮೀ. ಆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ದರ್ಶನ್ ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಅವರಷ್ಟು ಖುಷಿಪಟ್ಟವರು ಮತ್ತೊಬ್ಬರು ಇರಲಿಲ್ಲ. ದರ್ಶನ್ ಈಗ ಮತ್ತೆ ಅರೆಸ್ಟ್ ಆಗಿರೋದು ಅವರಿಗೆ ಬೇಸರ ಮೂಡಿಸಿದೆ.
ದರ್ಶನ್ ಅವರು ಕೊನೆಯದಾಗಿ ಬಂಧನಕ್ಕೆ ಒಳಗಾಗಿದ್ದು ವಿಜಯಲಕ್ಷ್ಮೀ ಅವರ ನಿವಾಸದಿಂದಲೇ. ಅವರನ್ನು ಅಲ್ಲಿಂದಲೇ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ವಿಜಯಲಕ್ಷ್ಮೀ ಅವರು ಸೈಲೆಂಟ್ ಆಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ದರ್ಶನ್ ಬ್ಯಾಕ್ ಪೋಸ್ನ ಫೋಟೋ ಹಾಕಿದ್ದಾರೆ. ದರ್ಶನ್ ಸರಳಿನ ಹಿಂದೆ ನಿಂತು ಏನನ್ನೋ ನೋಡುತ್ತಿದ್ದಾರೆ. ಈ ಪೋಸ್ಟ್ಗೆ ಅವರು ಒಡೆದ ಹೃದಯದ ಎಮೋಜಿ ಹಾಕಿದ್ದಾರೆ. ಎಲ್ಲವನ್ನೂ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.
ದರ್ಶನ್ ಅವರ ಬಂಧನ ಈ ಬಾರಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಕಳೆದ ಬಾರಿ ಬಂಧನ ಆದಾಗ ಅವರಿಗೆ ಕೆಳ ಹಂತದಲ್ಲಿ ಅಲ್ಲದೆ ಇದ್ದರೂ ಮೇಲಿನ ಕೋರ್ಟ್ನಲ್ಲಿ ಜಾಮೀನು ಸಿಗಬಹುದು ಎಂಬ ನಂಬಿಕೆ ಇತ್ತು. ಆದರೆ, ಈ ಬಾರಿ ಸಾಕಷ್ಟು ಚಾಲೆಂಜ್ಗಳು ಇವೆ. ದರ್ಶನ್ ಜಾಮೀನು ರದ್ದಾಗಿರುವುದು ಸುಪ್ರೀಂಕೋರ್ಟ್ನಿಂದ. ಉಚ್ಚ ನ್ಯಾಯಲಯ ಜಾಮೀನು ರದ್ದು ಮಾಡಿರುವುದರಿಂದ ಕೆಳ ಹಂತದ ಕೋರ್ಟ್ನಲ್ಲೂ ಬೇಲ್ ಸಿಗೋದು ಅನುಮಾನವಾಗಿದೆ.
For More Updates Join our WhatsApp Group:




