ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಕುಶಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಸ್ಥಳೀಯ ಗ್ರಾಮಸ್ಥರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಚೇಳೂರು ತಾಲೂಕಿನಲ್ಲಿ ನಡೆದಿದೆ.
ಹೊಸಹುಡ್ಯ ಗ್ರಾಮದ ಬಳಿ ನದಿಯನ್ನು ದಾಟುತ್ತಿದ್ದ ಕ್ಯಾಂಟರ್ ವಾಹನ ನೀರಿನ ರಭಸಕ್ಕೆ ಸಿಕ್ಕಿ ಕೆಟ್ಟುನಿಂತಿದ್ದು, ಚಾಲಕ ವಿಜಯ್ (ಪೆದ್ದೂರು ಗುಂಡ್ಲಹಳ್ಳಿ, ಚೇಳೂರು ತಾಲ್ಲೂಕು) ವಾಹನದಿಂದ ಇಳಿದ ಕ್ಷಣದಲ್ಲಿ ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.
ಆದರೆ ಜೀವದ ಹೋರಾಟದಲ್ಲಿ ವಿಜಯ್ ನದಿ ತೀರದ ಒಂದು ಕೊಂಬೆಯನ್ನು ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಹೊಸಹುಡ್ಯ ಗ್ರಾಮಸ್ಥರು ತಕ್ಷಣ ಜೆಸಿಬಿ ಸಹಾಯದಿಂದ ಸಾಹಸಮಯ ರಕ್ಷಣಾ ಕಾರ್ಯ ನಡೆಸಿ ವಿಜಯ್ ಅವರನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.
ಗ್ರಾಮಸ್ಥರ ವೇಗದ ಪ್ರತಿಕ್ರಿಯೆ ಮತ್ತು ಧೈರ್ಯದಿಂದ ಒಂದು ಜೀವ ಅಪಾಯದಿಂದ ಪಾರಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಗ್ರಾಮಸ್ಥರ ಶ್ಲಾಘನೆ ವ್ಯಕ್ತವಾಗಿದೆ.
For More Updates Join our WhatsApp Group :
