ವಿಶಾಖಪಟ್ಟಣಂ || ಯೋಗ ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ: ವಿಶಾಖಪಟ್ಟಣಂನಲ್ಲಿ ಪ್ರಧಾನಿ Narendra Modi ಮಾತು

ವಿಶಾಖಪಟ್ಟಣಂ || ಯೋಗ ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ: ವಿಶಾಖಪಟ್ಟಣಂನಲ್ಲಿ ಪ್ರಧಾನಿ Narendra Modi ಮಾತು

ವಿಶಾಖಪಟ್ಟಣಂ: ಯೋಗ ಇಂದು ವಿಶ್ವವನ್ನು ಒಂದಾಗಿ ಮಾಡಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಯೋಗ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘1 ಭೂಮಿ, 1 ಆರೋಗ್ಯಕ್ಕಾಗಿ ಯೋಗ’ ಶೀರ್ಷಿಕೆಯಡಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯೋಗ ವಿಶ್ವಾದ್ಯಂತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಕೆ.ಬೀಚ್ನಿಂದ ಭೋಗಪುರಂವರೆಗೆ 26 ಕಿ.ಮೀ. ಉದ್ದದ ಕಾರಿಡಾರ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಏಕಕಾಲದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಯೋಗ ಮಾಡಿದರು.

ವಿಶ್ವವೇ ಯೋಗ ದಿನ ಆಚರಿಸುತ್ತಿರುವುದು ಸಾಧಾರಣ ವಿಷಯವಲ್ಲ ಎಂದ ಪ್ರಧಾನಿ ಮೋದಿ

ದೇಶದ ಜನತೆಗೆ ಯೋಗ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು 175 ದೇಶಗಳು ಯೋಗ ದಿನ ಆಚರಣೆ ಮಾಡುತ್ತಿವೆ. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಯೋಗ ನೆರವಾಗಲಿದೆ. ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂದರ್ಥ. ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿರುವುದು ಸಾಧಾರಣ ವಿಷಯವಲ್ಲ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಮನುಷ್ಯ ಶಿಸ್ತುಬದ್ಧ ಜೀವನ ನಡೆಸಲು ಯೋಗ ಸಹಕಾರಿಯಾಗಲಿದೆ ಎಂದರು.

Leave a Reply

Your email address will not be published. Required fields are marked *