ಮತದಾನ ಹಕ್ಕು ಬಹಳ ಮುಖ್ಯ, ಅದನ್ನು ಉಳಿಸುವ ಪ್ರಯತ್ನ ರಾಹುಲ್ ಮಾಡುತ್ತಿದ್ದಾರೆ: Suresh

ಮತದಾನ ಹಕ್ಕು ಬಹಳ ಮುಖ್ಯ, ಅದನ್ನು ಉಳಿಸುವ ಪ್ರಯತ್ನ ರಾಹುಲ್ ಮಾಡುತ್ತಿದ್ದಾರೆ: Suresh

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡೋದು ಪ್ರತಿಯೊಬ್ಬ ನಾಗರಿಕನ ಹಕ್ಕು ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ನಿಮಿತ್ತ ಅದು ಹಾಳಾಗಬಾರದು ಅಂತ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೋರಾಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.

ಕರ್ನಾಟಕದಲ್ಲೂ ಚುನಾವಣೆಗಳ ಸಂದರ್ಭದಲ್ಲಿ ಅಕ್ರಮಗಳು ನಡೆದಿರುವುದನ್ನು ರಾಹುಲ್ ಪತ್ತೆ ಮಾಡಿದ್ದಾರೆ, ಹಾಗಾಗಿ ಬೆಂಗಳೂರು ನಗರದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮ ನಡೆದಿರುವುದನ್ನು ತಾನೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದೆ, ಅದರೆ ಎರಡೂ ಕಡೆಯಿಂದ ತನಗೆ ಜವಾಬು ಬಂದಿರಲಿಲ್ಲ ಎಂದು ಸುರೇಶ್ ಹೇಳಿದರು.

Leave a Reply

Your email address will not be published. Required fields are marked *