ನೀರಿನ ದರ ಪರಿಷ್ಕರಣೆ: ಅಪಾರ್ಟ್ಮೆಂಟ್ ಹಾಗೂ PGಗಳಿಗೆ ಜಲ ಮಂಡಳಿಯಿಂದ ರಿಲೀಫ್.

ನೀರಿನ ದರ ಪರಿಷ್ಕರಣೆ: ಅಪಾರ್ಟ್ಮೆಂಟ್ ಹಾಗೂ PGಗಳಿಗೆ ಜಲ ಮಂಡಳಿಯಿಂದ ರಿಲೀಫ್.

ಬೆಂಗಳೂರು: ಸುಮಾರು 10 ವರ್ಷಗಳ ಬಳಿಕ ಕಳೆದ ಏಪ್ರಿಲ್‌ನಲ್ಲಿ ನೀರಿನ ದರ ಹೆಚ್ಚಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಇದೀಗ ಅಪಾರ್ಟ್ಮೆಂಟ್ ಹಾಗೂ ಪಿಜಿ ವಸತಿಗಳಿಗೆ ಸಡಿಲಿಕೆ ನೀಡಿದೆ.

ಹೊಸ ನಿಯಮ ಏನು?

* ಇನ್ನು ಮುಂದೆ ಅಪಾರ್ಟ್ಮೆಂಟ್ ಹಾಗೂ ಪಿಜಿಗಳಿಗೆ ಒಟ್ಟಾರೆ ಬಳಕೆಯ ಆಧಾರದ ಮೇಲೆ ದರ ನಿಗದಿಯಾಗುವುದಿಲ್ಲ.

* ಬದಲಿಗೆ ಪ್ರತಿ ಮನೆ/ಕೊಠಡಿ ಆಧಾರಿತ ದರ ವಿಧಿಸಲಾಗುತ್ತದೆ.

* ಪ್ರತಿ ಮನೆಗೆ ದಿನಕ್ಕೆ 200 ಲೀಟರ್ ನೀರು ನಿಗದಿಯಾಗಲಿದೆ.

* ಮಿತಿಯೊಳಗಿನ ಬಳಕೆಗೆ ₹32 ಪ್ರತಿ ಕಿಲೋಲೀಟರ್, ಮಿತಿಗಿಂತ ಹೆಚ್ಚು ಬಳಕೆ ಮಾಡಿದರೆ ₹55 ಪ್ರತಿ ಕಿಲೋಲೀಟರ್ ದರ ವಿಧಿಸಲಾಗುತ್ತದೆ.

ಸಣ್ಣ ಅಪಾರ್ಟ್ಮೆಂಟ್‌ಗಳಿಗೆ ಹೊರೆ 200 ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಅಪಾರ್ಟ್ಮೆಂಟ್‌ಗಳಿಗೆ ಹೊಸ ಸ್ಲ್ಯಾಬ್‌ನಿಂದಾಗಿ ಬಿಲ್ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪಿಜಿಗಳಿಗೆ ನೈರ್ಮಲ್ಯ ಶುಲ್ಕದಲ್ಲಿ ಕಡಿತ:

* ಏಪ್ರಿಲ್‌ನಲ್ಲಿ ಪಿಜಿಗಳ ಮೇಲೆ ವಿಧಿಸಿದ್ದ ಅತಿಯಾದ ನೈರ್ಮಲ್ಯ ಶುಲ್ಕವನ್ನು ಈಗ ಶೇ.50 ಕ್ಕಿಂತ ಹೆಚ್ಚು ಕಡಿತ ಮಾಡಲಾಗಿದೆ.

* ಹಿಂದಿನ ದರದಲ್ಲಿ 20 ಕ್ಕಿಂತ ಹೆಚ್ಚು ಕೊಠಡಿಗಳಿರುವ ಪಿಜಿಗಳಿಗೆ ₹7,500 ಶುಲ್ಕ ವಿಧಿಸಲಾಗುತ್ತಿತ್ತು.

* ಪರಿಷ್ಕರಣೆ ಬಳಿಕ ಈಗ ಕೇವಲ ₹3,000 ಪಾವತಿಸಿದರೆ ಸಾಕು.

ನಿವಾಸಿಗಳ ಆತ್ಮಸಂತೃಪ್ತಿ:

ಹಿಂದಿನ ವ್ಯವಸ್ಥೆಯಿಂದ ಬಿಲ್‌ಗಳು ಅನಗತ್ಯವಾಗಿ ಹೆಚ್ಚಾಗುತ್ತಿವೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹೊಸ ನಿಯಮದಿಂದ ಹೆಚ್ಚಿನ ಅಪಾರ್ಟ್ಮೆಂಟ್‌ಗಳಿಗೆ ರಿಲೀಫ್ ಸಿಗುವ ನಿರೀಕ್ಷೆ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *