Wayanad landslide: ಗಂಟೆಗಟ್ಟಲೆ ಬಂಡೆಗೆ ಅಂಟಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿದ್ದು ರೋಚಕ

ವಯನಾಡ್: ದೇವರನಾಡು ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಭೂಕುಸಿತಕ್ಕೆ ಒಳಗಾದ ಗ್ರಾಮಗಳ ಪ್ರವಾಹಕ್ಕೆ ಸಂಬಂಧಪಟ್ಟ ಸುದ್ದಿಗಳು, ವಿಡಿಯೊಗಳು ಸಾಕಷ್ಟು ಹರಿದಾಡುತ್ತಿರುವುದರ ಮಧ್ಯೆ ಒಂದು ವಿಡಿಯೊ ಗಮನಸೆಳೆದಿತ್ತು. ನೀರಿನಿಂದ ಬದುಕುಳಿಯಲು ಮಣ್ಣಿನಿಂದ ಆವೃತವಾಗಿದ್ದ ವ್ಯಕ್ತಿ ಹತಾಶವಾಗಿ ಬೃಹತ್ ಬಂಡೆಯೊಂದಕ್ಕೆ ಅಂಟಿಕೊಂಡು ನಿಂತು ಸಹಾಯಕ್ಕಾಗಿ ಕೂಗುತ್ತಿದ್ದರು.

ಭೂಕುಸಿತದ ನಂತರ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ. ಮುಂಡಕ್ಕೈ ಗ್ರಾಮದಿಂದ ಪ್ರವಾಹದ ನೀರಿನಲ್ಲಿ ಚದುರಿದ ಬಂಡೆಗಳ ನಡುವೆ ಬದುಕುಳಿಯಲು ವ್ಯಕ್ತಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು. ಅಸಹಾಯಕ ಸ್ಥಳೀಯ ನಿವಾಸಿಗಳು ವ್ಯಕ್ತಿಯ ಹೋರಾಟವನ್ನು ನೋಡುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗಲಿಲ್ಲ. ತ್ವರಿತವಾಗಿ ಅವರನ್ನು ರಕ್ಷಿಸಲು ಅಧಿಕಾರಿಗಳನ್ನು ಒತ್ತಾಯಿಸಿದರು.

ಪ್ರವಾಹದ ನೀರಿನಿಂದ ಕೊಚ್ಚಿಹೋಗಿದ್ದ ಅವರು ಬೃಹತ್ ಬಂಡೆಗಳ ನಡುವೆ ಸಿಲುಕಿಕೊಂಡರು. ದಟ್ಟವಾದ ಜವುಗು ಮತ್ತು ಬಲವಾದ ಪ್ರವಾಹದಿಂದಾಗಿ ಸುರಕ್ಷಿತವಾಗಿ ನಿಲ್ಲಲು ಅಥವಾ ಈಜಲು ವ್ಯಕ್ತಿಗೆ ಸಾಧ್ಯವಾಗಿರಲಿಲ್ಲ.

ಗ್ರಾಮಸ್ಥರೊಬ್ಬರು ರೆಕಾರ್ಡ್ ಮಾಡಿದ ಅವರ ಸಂಕಟದ ದೃಶ್ಯಗಳನ್ನು ಸುದ್ದಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದ್ದು, ಆದಷ್ಟು ಬೇಗ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.

ಗಂಟೆಗಳ ಕಾಲ ಕಾರ್ಯಾಚರಣೆಯ ನಂತರ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರತಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅವರ ಗುರುತು ಅಥವಾ ಆರೋಗ್ಯದ ಯಾವುದೇ ವಿವರಗಳು ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *