ಮದುವೆ ಮಂಟಪಗಳಲ್ಲಿ ಕಳ್ಳತನ—ಖಾಕಿಗೆ ಸಿಕ್ಕ ಜಾಲ; 51 ಲಕ್ಷ ರೂ. ಚಿನ್ನ ಜಪ್ತಿ.
ದಾವಣಗೆರೆ : ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಜನರ ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದ ಮಧ್ಯಪ್ರದೇಶದ ಕುಖ್ಯಾತ ಬ್ಯಾಂಡ್ ಬಜಾ ಗ್ಯಾಂಗ್ನ ರಾಬರಿ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆರೋಪಿಗಳಿಂದ 51.49 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದು, ದಾಳಿ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಪ್ರತಿಷ್ಠಿತರ ಮದುವೆ ಸಮಾರಂಭಗಳಲ್ಲಿ ನೆರೆದಿದ್ದವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡೋದು ಈ ಗ್ಯಾಂಗ್ನ ಕಾಯಕವಾಗಿತ್ತು. ನ.14ರಂದು ಅಪೂರ್ವ ರೆಸಾರ್ಟ್ನಲ್ಲಿಯೂ ಆರೋಪಿಗಳು ಕೈಚಳಕ ತೋರಿದ್ದರು. ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಕೆಳಗಿಟ್ಟು ಚಪ್ಪಾಳೆ ತಟ್ಟುವಷ್ಟರಲ್ಲಿ ಅದನ್ನು ಗ್ಯಾಂಗ್ ಎಸ್ಕೇಪ್ ಮಾಡಿತ್ತು. 535 ಗ್ರಾಂ ಆಭರಣವಿದ್ದ ಬ್ಯಾಗ್ನ ಬ್ಯಾಂಡ್ ಬಜಾ ಗ್ಯಾಂಗ್ ಸದಸ್ಯರಾದ ಕರಣ್ ವರ್ಮಾ, ವಿನಿತ್ ಸಿಸೋಡಿಯಾ ಕದ್ದು ಪರಾರಿಯಾಗಿದ್ದರು.
ಖಚಿತ ಮಾಹಿತಿ ಆಧರಿಸಿ ದಾಳಿ
ಪ್ರಕರಣ ಸಂಬಂಧ ಮಧ್ಯಪ್ರದೇಶದ ಪರೋರಿನಗರಕ್ಕೆ ತೆರಳಿದ್ದ ದಾವಣಗೆರೆ ಪೊಲೀಸರು ವೇಷ ಬದಲಿಸಿ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಆರೋಪಿಗಳು ಮಧ್ಯವರ್ತಿಗೆ ಚಿನ್ನಾಭರಣವಿದ್ದ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದ್ದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ನರಸಿಂಗ್ ತಾಲೂಕಿನ ಕಡಿಯಾಸಾಂಸಿ, ಗುಲ್ಖೇಡಾ ಗ್ರಾಮದ ಗ್ಯಾಂಗ್ ಕಳ್ಳತನ ನಡೆಸಿದ್ದು ಈ ವೇಳೆ ಗೊತ್ತಾಗಿದ್ದು, ತಲತಲಾಂತರದಿಂದ ಕಳ್ಳತನವನ್ನೇ ಇಲ್ಲಿನ ಕೆಲವು ಜನರು ವೃತ್ತಿ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
For More Updates Join our WhatsApp Group :




