ಉತ್ತರ ಪ್ರದೇಶ : ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಯುವತಿ ಮೇಲೆ ಯುವಕ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆ ಮಾಡಿರುವ ಆರೋಪಿ ಪ್ರಿನ್ಸಿ ಯಾದವ್. ಆ ತಾಯಿ ಹೊತ್ತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಯುವತಿ ಇದನ್ನು ತಿರಸ್ಕರಿಸಿದ್ದಳು ಆದರೂ ಬೆಂಬಿಡದೆ ಮೂರು ತಿಂಗಳಿನಿಂದ ಮದುವೆಯಾಗುವಂತೆ ಪೇಡಿಸುತ್ತಿದ್ದ ಯುವತಿ ಆದರೂ ಮೊದಲಿನಂತೆ ನಿರಾಕರಿಸಿದ್ದಳು ಜೊತೆಗೆ ಯುವಕನ ಮೊಬೈಲ್ ನಂಬರ್ ಬ್ಲಾಕ್ ಮಾಡಿದರು ಬಿಡದೆ ಬೇರೆ ಬೇರೆ ಮೊಬೈಲ್ ನಂಬರ್ ಗಳಿಂದ ನಿರಂತರವಾಗಿ ಯುವತಿಗೆ ಕರೆ ಮಾಡುತ್ತಲೇ ಇದ್ದ. ನಂತರ ಯುವಕನ ಕಿರುಕುಳದ ಬಗ್ಗೆ ತಮ್ಮ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದಳು ಬಳಿಕ ಯುವತಿಯ ಪೋಷಕರು ಯುವಕನನ್ನು ತರಾಟೆಗೆ ತೆಗೆದುಕೊಂಡು ತಮ್ಮ ಪುತ್ರಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರು. ಅಷ್ಟು ಅಲ್ಲದೆ ಕೊಲೆಯಾದ ಯುವತಿಗೆ ಮದುವೆ ಕೂಡ ನಿಶ್ಚಯವಾಗಿತ್ತು ಇದೇ ನವೆಂಬರ್ ನಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು. ಯುವತಿ ಕೊಲೆ ಪ್ರಕರಣ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಅಂತ್ಯಕ್ರಿಯೆ ನಡೆದಿದ್ದು ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
ಪ್ರೇಮ ನಿವೇದನೆ ನಿರಾಕರಿಸಿದ ಯುವತಿಗೆ ಯುವಕ ಮಾಡಿದ್ದೇನು?
