ಕೊಪ್ಪಳದಲ್ಲಿ ಯುವಕನೊಬ್ಬನ ಕೊ*ಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಅರಸಿದ್ದಿ ಹೇಳೋದೇನು?

ಕೊಪ್ಪಳದಲ್ಲಿ ಯುವಕನೊಬ್ಬನ ಕೊಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಅರಸಿದ್ದಿ ಹೇಳೋದೇನು?

ಕೊಪ್ಪಳ : ನಿನ್ನೆ ರಾತ್ರಿ 8 ಗಂಟೆಗೆ ಸುಮಾರಿಗೆ ನಗರದ ವಾರ್ಡ್​ ನಂಬರ್ ಮೂರರಲ್ಲಿ ಗವಿಸಿದ್ದಪ್ಪ ನಾಯಕ್ ಹೆಸರಿನ 26-ವರ್ಷ ವಯಸ್ಸಿನ ಯುವಕನ ಕೊಲೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಹೇಳಿದರು.

ಸಾದಿಖ್ ಹುಸ್ಸೇನ್ ಎಂಬುವವನು ಎರಡು ಲಾಂಗ್​ಗಳನ್ನು ಬಳಸಿ ಕೊಲೆ ಮಾಡಿದ್ದಾನೆ, ಹತ್ಯೆಗೆ ಬಳಸಿದ ಆಯುಧ ಮತ್ತು ಕೊಲೆಗಾರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ ಎಸ್​ಪಿ ಇದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಕೊಲೆ, ಜನ ವಿಪರೀತ ಅರ್ಥಗಳನ್ನು ಕಲ್ಪಿಸಬಾರದು ಎಂದು ಹೇಳುತ್ತಾರೆ. ಪೊಲೀಸರು ಸಿಟಿ ರೌಂಡ್ಸ್ ಮಾಡುತ್ತಿದ್ದು ಪರಿಸ್ಥಿತಿ ಹದಗೆಡದಂತೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *