ಲಕ್ನೋ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ವಾಪಸಾಗಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ತವರೂರು ಲಕ್ನೋನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ತೆರೆದ ಜೀಪಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್ಫ್ಲೈಟ್ನಲ್ಲಿ ಪ್ರಯಾಣಿಸಿದ ಮೊದಲ ಭಾರತೀಯ ವ್ಯಕ್ತಿ.ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ.
ಸುಖೋಯ್ 30, ಜಾಗ್ವರ್, ಹಾಕ್, ಡಾರ್ನಿಯರ್ ಇತ್ಯಾದಿ ಜೆಟ್ ವಿಮಾನಗಳನ್ನು 2,000 ಗಂಟೆ ಹಾರಾಟ ಮಾಡಿದ ಅನುಭವಿ.ಅವರ ಸ್ವದೇಶಕ್ಕೆ ಮರಳುವಿಕೆಯನ್ನು ಆಚರಿಸಲು ನಗರದಲ್ಲಿ ಪ್ರಸ್ತುತ ವಿಕ್ಟರಿ ಪೆರೇಡ್ ಆಯೋಜಿಸಲಾಗಿದೆ. ಗಗನಯಾತ್ರಿಗಳು ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಸಿಎಂ ಯೋಗಿ ಅವರನ್ನು ಭೇಟಿ ಮಾಡಲು ಸಹ ನಿರ್ಧರಿಸಲಾಗಿದೆ.
For More Updates Join our WhatsApp Group :




