ಬಂಗಾರದ ಬೆಲೆ ದಿನೇ ದಿನೇ ಏರಿಕೆ ಕಡೆಗೆ ಮುಖ ಮಾಡುತ್ತಿದೆ. ಆಷಾಢ ಮುಗಿದು ಇದೀಗ ಶ್ರಾವಣ ಶುರುವಾಗಿದ್ದು, ಶುಭ ಕಾರ್ಯಗಳು ಅದ್ಧೂರಿಯಾಗಿ ಆರಂಭವಾಗಿವೆ. ಹೀಗಿದ್ದಾಗಲೇ ಚಿನ್ನದ ಬೆಲೆ ಸತತ ಏರಿಕೆ ಕಡೆಗೆ ಮುಖ ಮಾಡಿದ್ದು, ಇಂದು ಕೂಡ ಚಿನ್ನದ ರೇಟ್ ಮತ್ತೆ ಭರ್ಜರಿ ಏರಿಕೆ ಕಂಡಿದೆ.
ಆದರೆ ಬೆಳ್ಳಿ ಬೆಲೆಯಲ್ಲಿ ಭಾರಿ ದೊಡ್ಡ ಕುಸಿತ ಕಂಡು ಬಂದಿದ್ದು, ಇದೀಗ ಬೆಂಗಳೂರು & ಕರ್ನಾಟಕದಲ್ಲಿ ಎಷ್ಟಿದೆ ಗೊತ್ತಾ ಬಂಗಾರ & ಬೆಳ್ಳಿ ಬೆಲೆ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋದಕ್ಕೆ ಮುಂದೆ ಓದಿ.
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಹೀಗಿದ್ದಾಗ ಚಿನ್ನ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದು ಜನರಿಗೆ ಕೂಡ ಬೇಸರ ತರಿಸಿತ್ತು. ಆದರೆ ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬಂಗಾರದ ರೇಟ್? ಮುಂದೆ ಓದಿ.
ಚಿನ್ನದ ಬೆಲೆ ನಮ್ಮಲ್ಲಿ ಇಷ್ಟಿದೆ!
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಏರಿಕೆ ಬಳಿಕ ಹೊಸ ಹಂತ ತಲುಪಿದೆ. 100 ಗ್ರಾಂಗೆ 2,700 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ 7,05,800 ರೂಪಾಯಿ ಆಗಿದೆ. ಇದರ ಜೊತೆಗೆ, ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 70,580 ರೂಪಾಯಿಗೆ ಏರಿಕೆ ಆಗಿದೆ.