ನಿಮ್ಮ ಬಳಿ ಇರುವ ಪ್ರಾಪರ್ಟಿ ಡೀಡ್, ಬ್ಯಾಂಕ್ ಠೇವಣಿಯ ಪತ್ರ ಇತ್ಯಾದಿ ದಾಖಲೆಗಳು ಕಳೆದು ಹೋದರೆ ಎಂಥವರಿಗು ಸಹ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಬರುತ್ತದೆ.
ಇದು ತುಂಬಾ ಒತ್ತಡ ಮತ್ತು ಹಣಕಾಸು ನಷ್ಟವನ್ನು ಉಂಟುಮಾಡುತ್ತದೆ ಅಷ್ಟೇ ಅಲ್ಲದೆ ಮೂಲ ಪ್ರತಿಯಾಗಿದ್ದರೆ ಅದು ದುರ್ಬಳಕೆ ಆಗುವ ಆತಂಕ ಕೂಡ ಎದುರಾಗುತ್ತದೆ. ಪ್ರಾಪರ್ಟಿಗೆ ಸಂಬಂಧಪಟ್ಟ ದಾಖಲೆಗಳು ಕಳೆದು ಹೋದರೆ ಮೊದಲ ಹೆಜ್ಜೆಯಾಗಿ ಪೊಲೀಸ್ ಠಾಣೆಗೆ ತರಳಿ ದೂರು ನೀಡಬೇಕು
ನಂತರ ಎರಡು ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ಸೂಚನೆ ಪ್ರಕಟಿಸಬೇಕು. ದೂರಿನ ಪ್ರತಿಯನ್ನು ಮತ್ತು ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಇದು ನಿಮ್ಮ ದಾಖಲೆಗಳು ಕಳೆದು ಹೋಗಿರುವುದಕ್ಕೆ ಆಧಾರ. ಆಸ್ತಿಯ ಮಾಲೀಕತ್ವದ ದಾಖಲೆಯ ನಕಲಿ ಪ್ರತಿಯನ್ನು ಪಡೆಯಲು ಅಸಲಿ ಸೆಲ್ಡಿದ್ನ ಪ್ರಾಮಾಣಿಕೃತ ಪ್ರತಿ ಪಡೆಯಬೇಕು
ಇದನ್ನು ದಾಖಲೆಗಳು ನೋಂದಣಿ ಮಾಡಿಸಿದ ಸಬ್ ರಿಜಿಸ್ಟರ್ ಕಚೇರಿಯಿಂದ ಪಡೆದುಕೊಳ್ಳಬೇಕು. ಇನ್ನು ಬ್ಯಾಂಕ್ ಠೇವಣಿ ದಾಖಲೆಗಳ ನಕಲಿ ಪ್ರತಿ ಕಳೆದುಕೊಂಡಾಗ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು ಠೇವಣಿಗೆ ಮೊತ್ತ ಕಳೆದು ಹೋದ ಬಗೆಯನ್ನು ವಿವರಿಸಬೇಕು ನಿಮ್ಮ ಹೇಳಿಕೆ ತೃಪ್ತಿಕರವಾಗಿದ್ದಲ್ಲಿ ಬ್ಯಾಂಕ್ ನಕಲಿ ಪತ್ರ ಕೊಡುತ್ತದೆ.