ಹೋಲಿಕೆ ಮಾಡಿದ ವಿಚಾರದಲ್ಲಿ ಕ್ಷಮೆ ಕೇಳೋದು ಬಿಡೋದು ಯತೀಂದ್ರ ವಿವೇಚನೆಗೆ ಬಿಟ್ಟ ವಿಚಾರ: Yaduveer

ಹೋಲಿಕೆ ಮಾಡಿದ ವಿಚಾರದಲ್ಲಿ ಕ್ಷಮೆ ಕೇಳೋದು ಬಿಡೋದು ಯತೀಂದ್ರ ವಿವೇಚನೆಗೆ ಬಿಟ್ಟ ವಿಚಾರ: Yaduveer

ಮೈಸೂರು: ಮೈಸೂರು ಸಂಸದ ಮತ್ತು ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ ಒಡೆಯರ್ ತಮ್ಮ ಘನತೆಗೆ ತಕ್ಕಂತೆ ಮಾತಾಡುತ್ತಾರೆ. ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಜನಸಾಮಾನ್ಯರು ಮತ್ತು ನಾಯಕರು ಈಗಾಗಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 ಜನರಿಗೆ ಇದು ಭಾವನಾತ್ಮಕ ವಿಷಯ, ತಾನೂ ಏನೂ ಹೇಳಲ್ಲ, ಅವರಿಗೆ ಜನ ನಾಯಕತ್ವ ನೀಡಿದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡಲಿ, ಹೋಲಿಕೆ ಮಾಡುತ್ತ ಕಾಲಹರಣ ಮಾಡೋದು ಬೇಡ ಎಂದರು. ಜನಪ್ರತಿನಿಧಿಯಾಗಿ ತಾನು ಮತ್ತು ಕೇಂದ್ರ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಮಾತ್ರ ಗಮನ ಹರಿಸುತ್ತೇನೆ, ತನಗಿಂತ ಮೊದಲಿನ ಸಂಸದರಿಗಿಂತ ಜಾಸ್ತಿ ಕೆಲಸ ಮಾಡಿದೆ, ಕಡಿಮೆ ಮಾಡಿದೆ ಅಂತ ಹೇಳುತ್ತ ಕೂರಲ್ಲ ಎಂದು ಯದುವೀರ್ ಹೇಳಿದರು.

Leave a Reply

Your email address will not be published. Required fields are marked *