ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ಮೊದಲಿನಂತೆ ಈಗ ಅಪ್ತರಾಗಿ ಉಳಿದಿಲ್ಲವೇಕೆ..?

ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ಮೊದಲಿನಂತೆ ಈಗ ಅಪ್ತರಾಗಿ ಉಳಿದಿಲ್ಲವೇಕೆ..?

ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ನಡುವಿನ ಸ್ನೇಹ ಸಂಬOಧದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮುಂಬೈ ನಗರದ ಬೀದಿಗಳಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ಒಟ್ಟಿಗೆ ಕ್ರಿಕೆಟ್ ಆಡುತ್ತಾ ಬೆಳೆದವರು. ದೇಶೀ ಕ್ರಿಕೆಟ್‌ನಿಂದ ಭಾರತದ ಪರ ಜೊತೆಗೆ ಈ ಇಬ್ಬರು ಸ್ಟಾರ್ ಆಟಗಾರರು ಆಡಿದ್ದರು. ಆದರೆ, ಕ್ರಿಕೆಟ್ ದೇವರು ಸಚಿನ್ ಅವರಿಗೆ ಸಿಕ್ಕ ಯಶಸ್ಸು, ವಿನೋದ್ ಕಾಂಬ್ಳೆ ವೃತ್ತಿಜೀವನದಲ್ಲಿ ಸಿಗಲಿಲ್ಲ. ಇದಾದ ನಂತರ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರು.

ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ಮೊದಲಿನಂತೆ ಈಗ ಅಪ್ತರಾಗಿ ಉಳಿದಿಲ್ಲ. ಕಾರ್ಯಕ್ರಮ ಸೇರಿದಂತೆ ಯಾವುದಾರೂ ವಿಶೇಷ ಸಂದರ್ಭದಲ್ಲಿ ಇಬ್ಬರು ಮುಖಾಮುಖಿಯಾದರೆ ಮಾತುಕತೆ, ಇದರ ಹೊರತಾಗಿ ಉಳಿದ ಸಮಯಗಳಲ್ಲಿ ಇಬ್ಬರೂ ಭೇಟಿ ಮಾಡಿರುವುದು ತೀರಾ ಕಡಿಮೆ. ಇದೀಗ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತಾಯಿದೆ.

 ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಮೆಮೋರಿಯಲ್ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ವೇದಿಕೆಯಲ್ಲಿ ಮೂಲೆಯಲ್ಲಿ ಕುಳಿತುಕೊಂಡಿದ್ದ ವಿನೋದ್ ಕಾಂಬ್ಳಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಆದರೆ, ಈ ವೇಳೆ ವಿನೋದ್ ಕಾಂಬ್ಳೆ ಅವರು ಮಾಡಿದ ಮನವಿವನ್ನು ಸಚಿನ್ ತಿರಸ್ಕರಿಸಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಆಹ್ವಾನಿತ ಗಣ್ಯರ ಪೈಕಿ ವಿನೋದ್ ಕಾಂಬ್ಳಿ ಕೂಡ ವೇದಿಕೆಯ ಮೂಲೆಯಲ್ಲಿ ಕುಳಿತ್ತಿದ್ದರು. ಇದನ್ನು ನೋಡಿದ ಸಚಿನ್ ತಮ್ಮ ಮೀಸಲು ಇರಿಸಿದ ಆಸನದಿಂದ ಎದ್ದು ಹೋಗಿ ವಿನೋದ್ ಕಾಂಬ್ಳಿ ಅವರನ್ನು ಮಾತನಾಡಿಸಿದರು. ಆದರೆ, ಮೊದಲು ಬಂದಿರುವುದು ಸಚಿನ್ ಎಂದು ವಿನೋದ್ ಕಾಂಬ್ಳಿ ತಿಳಿಯಲಿಲ್ಲ. ಸಚಿನ್ ಎಂದು ಗೊತ್ತಾಗುತ್ತಿದ್ದಂತೆ ಸಂತಸಪಟ್ಟರು. ಸಚಿನ್ ಕೈ ಯನ್ನು ಹಿಡಿದು ತಮ್ಮ ಬಳಿ ಕುಳಿತುಕೊಳ್ಳುವಂತೆ ವಿನೋದ್ ಕಾಂಬ್ಳಿ ಮನವಿ ಮಾಡಿದರು. ಆದರೆ ವಿನೋದ್ ಕಾಂಬ್ಳಿ ಮನವಿಯನ್ನ ತಿರಸ್ಕರಿಸಿದ ಸಚಿನ್ ತಮಗೆ ಮೀಸಲಿರುವ ಆಸನದ ಕಡೆಗೆ ಹೊರಟು ಹೋದರು.

ಸಚಿನ್ ಹೀಗೆ ಮಾಡಿದ್ದು ಏಕೆ? ವಿನೋದ್ ಕಾಂಬ್ಳಿ ತಮ್ಮ ಬಳಿ ಕುಳಿತುಕೊಳ್ಳಲು ಮಕ್ಕಳಂತೆ ಹಠ ಮಾಡುತ್ತಿದ್ದಂತೆ ಸಚಿನ್ ಕಾರ್ಯಕ್ರಮ ಹಾಗೂ ತನ್ನ ಜವಾಬ್ದಾರಿ ಕುರಿತು ವಿವರಿಸಲು ಪ್ರಯತ್ನಿಸಿದರು. ಇದೇ ವೇಳೆ ಕಾರ್ಯಕ್ರಮ ಆಯೋಜಕರು ಸಚಿನ್ ಹಾಗೂ ಕಾಂಬ್ಳಿ ಪಕ್ಕ ಆಗಮಿಸಿದ್ದು, ಕಾಂಬ್ಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ವಿನೋದ್ ಕಾಂಬ್ಳಿ ಮಾಡಿದ ಮನವಿಯನ್ನು ಸಚಿನ್ ತೆಂಡೂಲ್ಕರ್ ತಿರಿಸ್ಕರಿಸಿ ಮುಂದೆ ಸಾಗಿಲ್ಲ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮನಿಸಿದ ಸಚಿನ್‌ಗಾಗಿ ನಿಗದಿಪಡಿಸಿ ಮಧ್ಯದ ಆಸನದಲ್ಲಿ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಕಾಂಬ್ಳಿ ಜೊತೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಸಚಿನ್ ಅವರ ನಡೆ ಕಾಂಬ್ಳಿಗೆ ಬೇಸರ ತರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕಾಂಬ್ಳಿಗೆ ಏನಾಯಿತು? ವಿನೋದ್ ಕಾಂಬ್ಳಿ ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೃದಯ ಸಮಸ್ಯೆಗಳು ಮತ್ತು ಖಿನ್ನತೆಯ ವಿರುದ್ಧ ಹೋರಾಡುತ್ತಿರುವ ಬಗ್ಗೆ ಅವರು ಈ ಹಿಂದೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವರು ಪ್ರತಿದಿನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 2010 ರ ಆರಂಭದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳ ನಂತರ ಅವರ ಸ್ಥಿತಿ ಸುಧಾರಿಸಿತು. 2013ರಲ್ಲಿ, ಚೆಂಬೂರಿನಿOದ ಬಾಂದ್ರಾಗೆ ಹೋಗುತ್ತಿದ್ದಾಗ ಅವರು ಹೃದಯ ಸ್ತಂಭನವಾಗಿತ್ತು. ತಕ್ಷಣ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *