ತುಮಕೂರು : ಭಕ್ತರಿಗೆ ಕುಂಕುಮ ಇಡುವ ವೇಳೆ ಅನುಚಿತ ವರ್ತನೆ ತೋರಿದ ಆರೋಪ ಹಿನ್ನೆಲೆಯಲ್ಲಿ ದೇವರಾಯನದುರ್ಗ ಅರ್ಚಕನ ಮೇಲೆ ಯುವಕರು ಹಲ್ಲೆ ಮಾಡಿರು ಘಟನೆ ನಡೆದಿದೆ. ತುಮಕೂರು ಹೊರವಲಯದಲ್ಲಿರುವ ದೇವರಾಯನದುರ್ಗ ದೇಗುಲದ ಅರ್ಚಕ ನಾಗಭೂಷಣಾಚಾರ್ಯಗೆ ಮಹಿಳೆಯರು, ಇಬ್ಬರು ಯುವಕರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕುಂಕುಮ ಇಡುವ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೂರ್ನಾಲ್ಕು ದಿನದ ಹಿಂದೆಯೇ ಈ ಘಟನೆ ನಡೆದಿದ್ದು, ಇದೀಗ ತಡವಾಗ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
For More Updates Join our WhatsApp Group :