ರಶ್ಮಿಕಾ ಅಪ್ಪನಿಗೆ ಇಲ್ಲದಿರೋ ತೊಂದರೆ ನಿಮ್ಮಗ್ಯಾಕೆ- ಟ್ರೋಲಿಗರಿಗೆ ಸಲ್ಮಾನ್ ಖಾನ್ ತಿರುಗೇಟು

ರಶ್ಮಿಕಾ ಅಪ್ಪನಿಗೆ ಇಲ್ಲದಿರೋ ತೊಂದರೆ ನಿಮ್ಮಗ್ಯಾಕೆ- ಟ್ರೋಲಿಗರಿಗೆ ಸಲ್ಮಾನ್ ಖಾನ್ ತಿರುಗೇಟು

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರ ಮಾ.30ರಂದು ರಿಲೀಸ್‌ಗೆ ರೆಡಿಯಿದೆ. ಸದ್ಯ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ರಶ್ಮಿಕಾ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಸಲ್ಮಾನ್‌ರನ್ನು ಟ್ರೋಲ್ ಮಾಡಿದ್ದರ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಅವರ ಅಪ್ಪನಿಗೆ ಏನು ತೊಂದರೆ ಇಲ್ಲ ಮತ್ಯಾಕೆ ನಿಮಗೆ ಸಮಸ್ಯೆ ಎಂದು ಖಡಕ್ ಆಗಿ ಸಲ್ಮಾನ್ ಮಾತನಾಡಿದ್ದಾರೆ.

‘ಸಿಕಂದರ್’ ಸಿನಿಮಾಗೆ ‘ಪುಷ್ಪ 2’ ನಟಿ ನಾಯಕಿ ಎನ್ನುತ್ತಿದ್ದಂತೆ ಸಲ್ಮಾನ್ ಮತ್ತು ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ನಡೆದಿತ್ತು. ಸಲ್ಮಾನ್‌ಗಿಂತ ರಶ್ಮಿಕಾ 31 ವರ್ಷ ಚಿಕ್ಕವರು. ಹಾಗಾಗಿ ಸಹಜವಾಗಿ ಸಲ್ಮಾನ್ ಟೀಕೆಗೆ ಗುರಿಯಾಗಿದ್ರು. ಹಾಗಾಗಿ ಇದೀಗ ಚಿತ್ರದ ಪ್ರಚಾರ ಕಾರ್ಯದ ವೇಳೆ ಸಲ್ಮಾನ್ ಮಾತನಾಡಿ, ಹೀರೋಯಿನ್‌ಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಕೇಳಿದ್ದಾ

ಮುಂದುವರೆದು, ರಶ್ಮಿಕಾಗೆ ನಾಳೆ ಮದುವೆಯಾಗ್ತಾರೆ, ಮುಂದೆ ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದು ಭಾವಿಸಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಮುಂದೆಯೂ ಕೂಡ ಅವರೊಂದಿಗೆ ಸಿನಿಮಾ ಮಾಡುತ್ತೇನೆ ಎಂದು ಟ್ರೋಲಿಗರಿಗೆ ನಟ ತಿರುಗೇಟು ನೀಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದು ಎಂದು ರಶ್ಮಿಕಾ ಹಿಂದೆ ನಿಂತು ತಲೆಯಾಡಿಸಿದ್ದಾರೆ.

ಒಟ್ನಲ್ಲಿ ಮಗಳ ವಯಸ್ಸಿನ ನಾಯಕಿ ಜೊತೆ ರೊಮ್ಯಾನ್ಸ್ ಮಾಡ್ತಿದ್ದೀರಾ ಎಂದು ಸಲ್ಮಾನ್‌ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ನಟನ ಮಾತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *