ದೇವರ ದರ್ಶನ ಪಡೆದು ಹೊರ ಬರುವ ಮುನ್ನ ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಕುಳಿತುಕೊಳ್ಳುವುದೇಕೆ?

ದೇವರ ದರ್ಶನ ಪಡೆದು ಹೊರ ಬರುವ ಮುನ್ನ ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಕುಳಿತುಕೊಳ್ಳುವುದೇಕೆ?

ನೀವು ಕೂಡಾ ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತೀರಿ ಅಲ್ವಾ. ಹೀಗೆ ಭೇಟಿ ನೀಡಿದಾಗ ದೇವರ ದರ್ಶನ ಪಡೆದು ಹೊರ ಬರುವ ಸಂದರ್ಭದಲ್ಲಿ ಸ್ವಲ್ಪ ಹೊತ್ತು ದೇವಾಲಯದೊಳಗೆ ಕುಳಿತು ಬಳಿಕ ಹೊರ ಬರುತ್ತೀರಿ ಅಲ್ವಾ. ಸಾಮಾನ್ಯವಾಗಿ ಎಲ್ಲಾ ಭಕ್ತರು ಇದೇ ನಿಯಮವನ್ನು ಅನುಸರಿಸುತ್ತಾರೆ. ಹೀಗೆ ದೇವರ ದರ್ಶನ ಪಡೆದು ಹೊರ ಬರುವ ಮುನ್ನ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕೂರುವುದರ ಹಿಂದಿನ ಕಾರಣ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಏನೇ ಕೆಟ್ಟದಾಗಲಿ ಅಥವಾ ಒಳ್ಳೆಯದಾಗಲಿ ನಾವು ಮೊದಲು ನೆನೆಯುವುದೇ ದೇವರನ್ನು ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದರೆ, ಮನಸ್ಸಿಗೆ ಸಮಧಾನ ಸಿಗಲೆಂದು ದೇವಾಲಯಕ್ಕೆ ಹೋದ್ರೆ, ಒಳ್ಳೆಯದು ನಡೆದಾಗ ದೇವರಿಗೆ ಧನ್ಯವಾದ ಅರ್ಪಿಸಲು ಭೇಟಿ ನೀಡುತ್ತೇವೆ. ಹೀಗೆ ಪ್ರತಿಯೊಬ್ಬರೂ ಕೂಡ ಮನಸ್ಸಿನ ಶಾಂತಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮತ್ತು ದೇವರ ದರ್ಶನ ಪಡೆದು ಸ್ಪಲ್ಪ ಹೊತ್ತು ಅಲ್ಲೇ ಕುಳಿತು ಬಳಿಕ ಹೊರ ಬರುತ್ತಾರೆ. ದೇವರ ದರ್ಶನ ಪಡೆದು ಹೊರ ಬರುವ ಮೊದಲು ದೇವಾಲಯದಲ್ಲಿ ಹೀಗೆ ಎಲ್ಲರೂ ಸ್ಪಲ್ಪ ಹೊತ್ತು ಕುಳಿತುಕೊಳ್ಳುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ದರ್ಶನ ಪಡೆದು ಹೊರ ಬರುವ ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತುಕೊಳ್ಳುವುದೇಕೆ?

ಹಿಂದೂ ಸಂಪ್ರದಾಯದಲ್ಲಿ, ದೇವರ ದರ್ಶನ ಪಡೆದು ದೇವಾಲಯದಿಂದ ಹೊರ ಬರುವ ಮೊದಲು ದೇವಾಲಯದ ಪ್ರಾಂಗಣದಲ್ಲಿದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವ ವಾಡಿಕೆ ಇದೆ. ಇದರ ಹಿಂದೆಯೂ ಒಂದು ಕಾರಣವಿದೆಯಂತೆ. ಅದೇನೆಂದರೆ, ದೇವಾಲಯಕ್ಕೆ ಭೇಟಿ ಕೊಟ್ಟು ದೇವರನ್ನು ನೋಡಿ ಅರ್ಜೆಂಟ್ ಆಗಿ ಸೀದಾ ಹೊರಗೆ ನಡೆದರೆ, ಅದೇ ಕೆಲಸ, ಅದೇ ಜಂಜಾಟದ ಟೆನ್ಷನ್ ಹಾಗೆಯೇ ಮನಸ್ಸಲ್ಲಿ ಉಳಿದು ಬಿಡುತ್ತದೆ. ಶಾಂತಿ ಎನ್ನುವುದು ಲಭಿಸುವುದೇ ಇಲ್ಲ. ಆದ್ರೆ ದರ್ಶನದ ನಂತರ ಸ್ವಲ್ಪ ಸಮಯ ದೇವರನ್ನು ಸ್ಮರಿಸುತ್ತಾ, ಪೂಜೆ, ಹೋಮ ಹವನಗಳನ್ನು ಕಣ್ತುಂಬಿಕೊಂಡರೆ ಮನಸ್ಸಿನಲ್ಲಿರುವ ಕಲ್ಮಶ, ನೋವು ಕರಗಿ ಮನಸ್ಸು ಹಗುರವಾಗುತ್ತದೆ. ಇದರ ಜೊತೆಗೆ ದೇವಾಲಯದಲ್ಲಿರುವ ಸಕಾರಾತ್ಮಕ ಶಕ್ತಿಯು ನಮ್ಮೊಳಗೆ ಸೇರಿ, ಇದು ನಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ.

Leave a Reply

Your email address will not be published. Required fields are marked *