shravana ಮಾಸದಲ್ಲಿ Onion, garlic ಏಕೆ ತಿನ್ನಬಾರದು? ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ..

shravana ಮಾಸದಲ್ಲಿ Onion, garlic ಏಕೆ ತಿನ್ನಬಾರದು? ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ..

ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರಲು ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಧಾರ್ಮಿಕವಾಗಿ, ಶ್ರಾವಣವು ಪವಿತ್ರ ಮಾಸವಾಗಿದ್ದು, ತಾಮಸಿಕ ಆಹಾರವನ್ನು ತಪ್ಪಿಸಬೇಕು. ವೈಜ್ಞಾನಿಕವಾಗಿ, ಮಳೆಗಾಲದಲ್ಲಿ ಜೀರ್ಣಕ್ರಿಯೆ ದುರ್ಬಲವಾಗುವುದರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಹಸಿರು ತರಕಾರಿ ಮತ್ತು ಬದನೆಕಾಯಿಗಳನ್ನು ಸಹ ತಪ್ಪಿಸುವುದು ಉತ್ತಮ. ತುಳಸಿ ಅಥವಾ ಶುಂಠಿ ಚಹಾ, ಬಟಾಣಿ, ಕಡಲೆ ಮುಂತಾದ ಆಹಾರಗಳು ಆಯ್ಕೆಗಳಾಗಿವೆ.

ಶ್ರಾವಣ ಮಾಸವು ಜುಲೈ 23 ರಿಂದ ಆರಂಭವಾಗುತ್ತಿದೆ. ಈ ಮಾಸದಲ್ಲಿ ಸಾಕಷ್ಟು ಜನರು ಉಪವಾಸ ಆಚರಿಸುತ್ತಾರೆ. ಜೊತೆಗೆ ಮಾಂಸಾಹಾರ ಮತ್ತು ಬೆಳ್ಳುಳ್ಳಿ, ಈರುಳ್ಳಿ ಸೇವನೆಯನ್ನು ತ್ಯಜಿಸುತ್ತಾರೆ. ಆದರೆ ಈ ಮಾಸದಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನು ಏಕೆ ತಿನ್ನಬಾರದು ಎಂದು ತಿಳಿದಿದೆಯೇ? ಇದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿವೆ

ಧಾರ್ಮಿಕ ಕಾರಣಗಳು:

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವು ಅತ್ಯಂತ ಪ್ರವಿತ್ರವಾದುದು. ಈ ಸಮಯದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿದೆ. ಜೊತೆಗೆ ಈ ಸಮಯದಲ್ಲಿ ತಾಮಸಿಕ ಆಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಆಹಾರವೆಂದು ಪರಿಗಣಿಸಲಾಗಿರುವುದರಿಂದ ಇದರ ಸೇವನೆಯನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ಕಾರಣಗಳು:

ವೈಜ್ಞಾನಿಕವಾಗಿ ಹೇಳುವುದಾದರೆ, ಆಯುರ್ವೇದ ತಜ್ಞರಾದ ಡಾ. ಕಿರಣ್ ಗುಪ್ತಾ ಅವರು ವಿವರಿಸುತ್ತಾರೆ. ಶ್ರಾವಣ ಮಾಸ ಅಂದರೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ದುರ್ಬಲಗೊಳ್ಳುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸ್ವಭಾವತಃ ಖಾರವಾಗಿದ್ದು,ಇದು ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡಬಹುದು. ಆದ್ದರಿಂದ, ಮಳೆಗಾಲದಲ್ಲಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಹೊಟ್ಟೆಯಲ್ಲಿ ಗ್ಯಾಸ್, ವಾಂತಿ ಮತ್ತು ಉರಿಯಂತಹ ಸಮಸ್ಯೆಗಳನ್ನು ಅನುಭವಿಸಬಹುದು ಎಂದು ಹೇಳುತ್ತಾರೆ.

ಇದಲ್ಲದೇ ಈ ಸಮಯದಲ್ಲಿ ಸೊಪ್ಪು ತರಕಾರಿ ಮತ್ತು ಬದನೆಕಾಯಿಗಳನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಈ ಋತುವಿನಲ್ಲಿ ತೇವಾಂಶದಿಂದಾಗಿ ಪರಿಸರದಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಸೊಳ್ಳೆಗಳು ಮತ್ತು ಕೀಟಗಳು ಸಹ ಹೆಚ್ಚಾಗಿ ಇರುತ್ತವೆ. ಇದು ಹಸಿರು ತರಕಾರಿಗಳು ಮತ್ತು ಬದನೆಕಾಯಿಗಳಿಗೆ ಮುತ್ತಿಕೊಳ್ಳುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಅವುಗಳನ್ನು ತಪ್ಪಿಸಬೇಕು. ಅಲ್ಲದೆ ಬದನೆಕಾಯಿ ಜೀರ್ಣಿಸಿಕೊಳ್ಳಲು ಕಷ್ಟ.

Leave a Reply

Your email address will not be published. Required fields are marked *