ಸೀಮೆಎಣ್ಣೆ ಸುರಿದು ಪತ್ನಿ ಕೊOದ ಭೂಪ‌ 27 ವರ್ಷದ ಬಳಿಕ‌ ಅರೆಸ್ಟ್

ಸೀಮೆಎಣ್ಣೆ ಸುರಿದು ಪತ್ನಿ ಕೊದ ಭೂಪ 27 ವರ್ಷದ ಬಳಿಕ ಅರೆಸ್ಟ್

ತುಮಕೂರು : ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟು ಕೊಲೆ‌ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ತಾಲೂಕು ಕುಡುವನಘಟ್ಟದ ನಿಂಗಪ್ಪ(62)ಬಂಧಿತ ಆರೋಪಿ. ಬರೋಬ್ಬರಿ 27 ವರ್ಷಗಳ ಬಳಿಕ‌

ನೊಣವಿನಕರೆ ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.

ತಿಪಟೂರು ತಾಲೂಕು ಕುಡುವನಘಟ್ಟದ ನಿಂಗಪ್ಪ(62) ಆತನ ಪತ್ನಿ ಗೌರಮ್ಮನನ್ನು 1997 ಮೇ.4ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದನು.

ತನ್ನ 35ನೇ ವರ್ಷದಲ್ಲಿ ಊರು ಬಿಟ್ಟು ಹೋಗಿದ್ದ ನಿಂಗಪ್ಪ ಈಗ 62ನೇ ವಯಸ್ಸಿನಲ್ಲಿ ಊರಿಗೆ ವಾಪಸಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕುಡುವನಘಟ್ಟದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *