ಬೆಂಗಳೂರು: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಗಿರಿನಗರದಲ್ಲಿ ನಡೆದಿದೆ. ಗಗನ್ ರಾವ್ ನೇಣಿಗೆ ಶರಣಾದ ಪತಿ. ದಂಪತಿ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದ ನೊಂದ ಗಗನ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಬ್ಯಾಂಕ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ರಾವ್, ಎಂಟು ತಿಂಗಳ ಹಿಂದೆ ಮೇಘನಾ ಜತೆ ಮದುವೆಯಾಗಿದ್ದರು. ಮನೆಯಲ್ಲಿ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಗನ್ ರಾವ್ ಸಹೋದರಿ ಮೇಘನಾ ವಿರುದ್ಧ ದೂರು ನೀಡಿದ್ದಾರೆ.
ಪ್ರಿಯಕರನೊಂದಿಗೆ ಪತ್ನಿ ಪರಾರಿ: ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆಗೆ ಶರಣು
ತನ್ನ ಹೆಂಡತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಕ್ಕೆ ಮರ್ಯಾದೆಗೆ ಅಂಜಿದ ಗಂಡ ಹೆತ್ತ ಮಗಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಇತ್ತೀಚೆಗೆ ಕೋಲಾರದಲ್ಲಿ ನಡೆದಿತ್ತು. ಪೊಲೀಸರು ಈಗಾಗಲೇ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದ ಲೋಕೇಶ್ (37), ತಾನೇ ಹೆತ್ತು ಹೊತ್ತು ಸಾಕಿದ 4 ವರ್ಷದ ಕಂದಮ್ಮ ನಿಹಾರಿಕಾಳನ್ನ ಕೊಲೆಗೈದು, ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದರು. ಕೆಲ ತಿಂಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಲೋಕೇಶ್, ಕಡೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದು, ಯಾರೂ ಊಹಿಸದ ದುರಂತ ಅಂತ್ಯಕಂಡಿದ್ದಾರೆ.
ಬಾಳಿಗೆ ಬೆಳಕಾಗಿ ಬಂದ ಹೆಂಡತಿಯೇ ಪ್ರಿಯಕರನ ಜೊತೆ ಓಡಿಹೋದ ವಿಚಾರ ತಿಳಿದ ಗಂಡ, ಮುಂದೆ ಕೇಳಿ ಬರಬಹುದಾದ ಟೀಕೆಗಳಿಗೆ ಉತ್ತರಿಸಲಾಗದೆ ಈ ಕಠಿಣ ನಿರ್ಧಾರಕ್ಕೆ ಕೈ ಹಾಕಿರಬಹುದು ಎಂದು ಮನೆಯವರ ಅಭಿಪ್ರಾಯವಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
For More Updates Join our WhatsApp Group :
