ತಮಿಳುನಾಡಿನಿಂದ ಬಂದ ಐದು ಕಾಡಾನೆಗಳಿಂದ ಬೆಳೆ ನಾಶ.
ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ತಮಿಳುನಾಡಿನಿಂದ ಬಂದ ಐದು ಕಾಡಾನೆಗಳ ಹಿಂಡು ಟೊಮ್ಯಾಟೊ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದಲ್ಲದೆ ಆನೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಆತಂಕ ಉಂಟಾಗಿದೆ.
ಈ ಹಿನ್ನೆಲೆ ರೈತರು ರಾತ್ರಿ ವೇಳೆ ತೋಟಗಳಿಗೆ ಹೋಗದಂತೆ ಮತ್ತು ಅರಣ್ಯ ಪ್ರದೇಶದಲ್ಲಿ ದನಕರುಗಳನ್ನು ಮೇಯಿಸದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
For More Updates Join our WhatsApp Group :




