ಹೈದರಾಬಾದ್ : ಹೈದರಾಬಾದ್ ನಟ ಅಲ್ಲು ಅರ್ಜುನ್ ಅವರ “ಪುಷ್ಪಾ 2: ದಿ ರೂಲ್” ನ ಪ್ರೀಮಿಯರ್ ಶೋ ವೇಳೆ ಇಲ್ಲಿನ ಚಲನಚಿತ್ರ ಮಂದಿರದಲ್ಲಿ ಜನಸಂದಣಿಯಿಂದ ಉಸಿರುಗಟ್ಟಿದ ಕಾರಣ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಸಂಧ್ಯಾ ಥಿಯೇಟರ್ನಲ್ಲಿ ನಟನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು ಎಂದು ಉಪ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.