ಎಲ್ಲಾಕ್ಷೇತ್ರದಲ್ಲಿಯೂ ತನ್ನ ಚಾಪು ಮೂಡಿಸುವಲ್ಲಿ  ಮಹಿಳೆ ಮುಂದು..!

ಎಲ್ಲಾಕ್ಷೇತ್ರದಲ್ಲಿಯೂ ತನ್ನ ಚಾಪು ಮೂಡಿಸುವಲ್ಲಿ ಮಹಿಳೆ ಮುಂದು..!

ಮಹಿಳೆ ಪ್ರತಿಕಾಲಘಟ್ಟದಲ್ಲಿಯೂಒಂದೊOದುಇತಿಹಾಸ ಸೃಷ್ಟಿಸುತ್ತಾ ಬರುತ್ತಿದ್ದಾಳೆ. ಈ ಸಮಾಜಕ್ಕೆ ಬಹಳ ಮುಖ್ಯಎಂದುತೋರಿಸುತ್ತಾ ಬಂದಿದ್ದಾಳೆ. ಎಲ್ಲಾಕ್ಷೇತ್ರದಲ್ಲಿಯೂತನ್ನಛಾಪು ಮೂಡಿಸುತ್ತಿದ್ದಾಳೆ. ಇಂತಹ ಮಹಿಳೆ ಸಂವಿಧಾನಾತ್ಮಕವಾಗಿಯೂತನಗಿರುವ ಹಕ್ಕುಗಳನ್ನು ಅರಿತರೆ ಮತ್ತ? ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇ? ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಸಂವಿಧಾನರಚನಾ ಸಭೆಯಲ್ಲಿಯೂ ಸಹಾ 15 ಮಹಿಳಾ ಸದಸ್ಯೆಯರಿದ್ದರು. ಸಂವಿಧಾನಜಾರಿಗೊOಡ ನಂತರವೂ ಸರ್ಕಾರದಎಲ್ಲಾ ಹುದ್ದೆಗಳಲ್ಲಿಯೂ ಹಾಗೂ ಅಧಿಕಾರಗಳಲ್ಲಿಯೂ ಮಹಿಳೆಯರು ತಮ್ಮಇರುವಿಕೆ ಹಾಗೂ ನೈಪುಣ್ಯತೆಯನ್ನು ತೋರುಪಡಿಸಿದ್ದಾರೆ. ಹಾಗೆಯೇ ಮಹಿಳೆಯರ ಏಳಿಗೆಗಾಗಿ ಸರ್ಕಾರಗಳು ಹಲವು ಯೋಜನೆಗಳನ್ನೂ ಸಹಾ ರೂಪಿಸಿ ಜಾರಿಗೆತರಲಾಗಿದೆ.

ಆದರೆಇಂತಹ ಹಲವು ಕಾನೂನುಗಳು, ಯೋಜನೆಗಳು ಮಹಿಳೆಯರು ತಿಳಿಯುವ ಅಗತ್ಯ ಬಹಳ ಇದೆ. ಆಗ ಮಾತ್ರ ಮಹಿಳೆ ರಾಜಕೀಯವಾಗಿ, ಸಾಮಾಜಿಕವಾಗಿಅರಿತು ಬೆರೆತು ಬೆಳೆಯಲು ಅಸ್ಪದವಾಗುತ್ತದೆ. ಪ್ರಮುಖವಾಗಿ ” ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ” ಯೂ ಮಹಿಳೆಯರ ಸಬಲೀಕರಣಕಾಗಿಯೇಇರುವ ಪ್ರಮುಖಇಲಾಖೆಯಾಗಿದೆ.

ಈ ಇಲಾಖೆ ಮಹಿಳೆಯರಿಗೆ, ಕಿಶೋರಿಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಯೋಜನೆಗಳನ್ನು ಹೊಂದಿದೆ. ಮಹಿಳೆಯರಿಗಿರುವ ಯೋಜನೆಗಳನ್ನು ಅವರಆರೋಗ್ಯ, ಆರ್ಥಿಕತೆ, ರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬOಧಿಸಿದ್ದವುಗಳಾಗಿವೆ. ಇವೆಲ್ಲವೂ ಮಹಿಳೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ.

 ಇಲಾಖಾ ಯೋಜನೆಗಳು ಇಲ್ಲಿವೆ.

೧. ಉದ್ಯೋಗಿನಿ ಯೋಜನೆ

ಮಹಿಳೆಯರು ಆದಾಯೋತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಳು ಸಾಲ ಮತ್ತು ಸಹಾಯಧನದಜೊತೆಗೆ ಉದ್ಯಮಶೀಲತಾ ತರಬೇತಿ ನೀಡುವಯೋಜನೆಇದಾಗಿದೆ.

೨. ಕಿರುಸಾಲ ಯೋಜನೆ

ಆದಯೋತ್ಪನ್ನಚಟುವಟಿಕೆ ನಡೆಸಲು ಸ್ತ್ರೀಶಕ್ತಿ ಗುಂಪುಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡುವುದು ಈ ಯೋಜನೆಯಉದ್ದೇಶವಾಗಿದೆ.

೩. ಲಿಂಗತ್ವಅಲ್ಪ ಸಂಖ್ಯಾತರ ಪುನರ್ವಸತಿಯೋಜನೆ

ಲಿಂಗತ್ವಅಲ್ಪಸOಖ್ಯಾತರುಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯ ಹಾಗೂ ಉದ್ಯಮಶೀಲತಾ ತರಬೇತಿಕೊಡಿಸುವ ಮೂಲಕ ವೃತ್ತಿ ಆರಂಭಿಸಿ ಘನತೆಯಜೀವನ ನಡೆಸಲು ಪ್ರೋತ್ಸಾಹ ನೀಡುವುದು ಈ ಯೋಜನೆಯಗುರಿಯಾಗಿದೆ.

೪. ಚೇತನಾಯೋಜನೆ

ಈ ಯೋಜನೆಯಡಿ ಆಸಕ್ತಿಯುಳ್ಳ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂಉದ್ಯೋಗಕ್ಕಾಗಿ ಸಾಲ ಸೌಲಭ್ಯ ಹಾಗೂ ಉದ್ಯಮಶೀಲತಾ ತರಬೇತಿ ಕೊಡಿಸಿ ಘನತೆಯಜೀವನ ನಡೆಸಲು ಸಹಾಯಧನ ನೀಡಲಾಗುವುದು.

 ೫. ಧನಶ್ರೀ ಯೋಜನೆ

ಊIಗಿ ಸೋಂಕಿತ ಸಂತ್ರಸ್ತೆಯರು ಸ್ವಯಂಉದ್ಯೋಗಕೈಗೊOಡುಆರ್ಥಿಕಅಭಿವೃದ್ಧಿ ಹೊಂದಲು ನೇರ ಸಾಲ ನೀಡುವುದು ಈ ಯೋಜನೆಯಉದ್ದೇಶವಾಗಿದೆ.

 ೬. ಸಮೃದ್ಧಿ ಯೋಜನೆ

ಆರ್ಥಿಕವಾಗಿ ಹಿಂದುಳಿದ ಬಿಡಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತುಗ್ರಾಮೀಣ ಪ್ರದೇಶದ ಬಡತನರೇಖೆಗಿಂತ ಕೆಳಗಿರುವ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹಧನಒದಗಿಸುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ನಿರುದ್ಯೋಗ ಸಮಸ್ಯೆಯ ನಿವಾರಣೆ ಈ ಯೋಜನೆಯಆಶಯವಾಗಿದೆ.

೭. ಮಹಿಳಾ ವಿಶೇ? ಚಿಕಿತ್ಸಾಘಟಕ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಸೌಲಭ್ಯಅಂದರೆತುರ್ತು ವೈದ್ಯಕೀಯಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ ವ್ಯವಸ್ಥೆಯನ್ನುಒದಗಿಸಲುಆರಂಭವಾದಯೋಜನೆಇದಾಗಿದೆ.

ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಈ ಸಂದರ್ಭದಲ್ಲಿ ಮಹಿಳಾ ಪ್ರಗತಿದೇಶದ ಏಳಿಗೆಗೆ ಬಹಳ ಮುಖ್ಯ. ಈ ಎಲ್ಲ ಯೋಜನೆಗಳು ಎಲ್ಲಾ ಮಹಿಳೆಯರ ಅರಿವಿಗೆ ಬಂದಾಗ ಬಹುಶಃ ಮಹಿಳಾ ಸಬಲೀಕರಣ ಮತ್ತೊಂದುದೊಡ್ಡ ಹಂತತಲುಪುವುದರಲ್ಲಿ ಸಹಾಯವಾಗುತ್ತದೆ

Leave a Reply

Your email address will not be published. Required fields are marked *