ಮಧುಗಿರಿಯಲ್ಲಿ ₹12.48 ಕೋಟಿ ಕಾಮಗಾರಿಗಳಿಗೆ ಚಾಲನೆ.

ಮಧುಗಿರಿಯಲ್ಲಿ ₹12.48 ಕೋಟಿ ಕಾಮಗಾರಿಗಳಿಗೆ ಚಾಲನೆ.

ಶಾಸಕ ಕೆ.ಎನ್. ರಾಜಣ್ಣರಿಂದ ಭೂಮಿಪೂಜೆ, ಗುದ್ದಲಿ ಪೂಜೆ ಕಾರ್ಯಕ್ರಮ.

ಮಧುಗಿರಿ: 12.48 ಕೋಟಿ ರೂಗಳ ವಿವಿಧ ಕಾಮಗಾರಿಗೆ ಕೆಎನ್ ರಾಜಣ್ಣ ಚಾಲನೆ  ಇಂದು ನಿಕಟ ಪೂರ್ವ ಸಹಕಾರ ಸಚಿವ ವಿಧಾನಸಭೆ ಭರವಸೆ ಸಮಿತಿ ಅಧ್ಯಕ್ಷ ಮಧುಗಿರಿ ಶಾಸಕರಾದ ಕೆ ಎನ್ ರಾಜಣ್ಣ ವಿವಿಧ ಕ್ಷೇತ್ರ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳ ಅನಾವರಣವನ್ನು ಹಮ್ಮಿಕೊಳ್ಳಲಾಗಿತ್ತು.

ಬಡವನಹಳ್ಳಿ ಗಿಡದಾಗಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ, ಸುಮಾರು 3.2 ಕೋಟಿ ವೆಚ್ಚದ ನೂತನ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಪೂಜೆಯನ್ನು ನೆರ್ವೇರಿಸಿದ್ರು. ಇದರ ಜೊತೆಗೆ ಕೇಟಿಹಳ್ಳಿ, ಗಿಡ್ದಾಗಲಹಳ್ಳಿ ಗ್ರಾಮದ ಜನರ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ನಿವಾರಿಸಲು ಮುಂದಾದರು. ತದನಂತರ ಹಾವಿನ ಮಡಗು ಗ್ರಾಮದ ಎಚ್ ಪಿ ಎಸ್ ಶಾಲೆಯ ನೂತನ ಕೊಠಡಿ 14.5ಲಕ್ಷದ ಕಟ್ಟಡದ ಗುದ್ದಲಿ ಪೂಜೆಗೈದು ಅಧಿಕೃತವಾಗಿ ಚಾಲನೆ ನೀಡಿದರು.

ಸರ್ಕಾರಿ ಶಾಲೆಯ ಮಕ್ಕಳ ಶಿಸ್ತನ್ನು ಕಂಡು ಸಂತಸ ವ್ಯಕ್ತಪಡಿಸಿದ್ದರು. ಸುಮಾರು ಮಧ್ಯಾಹ್ನದ ಹೊತ್ತಿಗೆ 3 ಕೋಟಿ ವೆಚ್ಚದ ಶಂಕರಪುರ ಜಕ್ಕೇನಹಳ್ಳಿ ಸುವರ್ಣಮುಖಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ಅನ್ನು ಅಡ್ಡಲಾಗಿ ನಿರ್ಮಿಸಲಾಗಿದ್ದು ಅದರ ವೀಕ್ಷಣೆಗೆ ಹೋಗಿ ತ್ವರಿತವಾಗಿ ಉತ್ತಮ ಗುಣಮಟ್ಟ ಕಾಮಗಾರಿಯನ್ನು ಕೈಗೊಳ್ಳುವಂತೆ ಗುತ್ತಿಗೆದಾರರನ್ನು ಎಚ್ಚರಿಸಿದ್ರು.  ನಂತರ ಸಜ್ಜೆ ಹೊಸಹಳ್ಳಿ ಸುವರ್ಣಮುಖಿ ನದಿಗೆ ಬ್ರಿಡ್ಜ್ ಕಾಮಗಾರಿ ಪ್ರಗತಿಗಾಗಿ ಸುಮಾರು 2.5 ಕೋಟಿ ರೂಗಳನ್ನು ಬಿಡುಗಡೆಗೊಳಿಸಿದ್ದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಎಚ್ಚರಿಸಿದ್ರು.

ತದನಂತರ ಸಜ್ಜೆ ಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಭೀಮನಕುಂಟೆ, ಬೋರ ಮುತ್ತನಹಳ್ಳಿ, ವಿಠಲಪುರ, ಬೊಮ್ಮಯ್ಯನಪಾಳ್ಯ ಮಾರ್ಗವಾಗಿ ಎನ್ ಹೆಚ್4 ಇಂದ ಮುದ್ದೇನಹಳ್ಳಿ ಸ್ಟೇಟ್ ಹೈವೆ 159 ಸೇರುವ ಆಯದ ಭಾಗಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 3.5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನಿರ್ಧರಿಸಿದ್ದರು.

 ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು..

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *