ತುಮಕೂರು: ತುಮಕೂರಿನಲ್ಲಿ ನಡೆದ ಎಬಿವಿಪಿ ರಥಯಾತ್ರೆ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗಿಯಾಗಿದ್ದಾರೆ ಎಂಬ ಸುದ್ದಿಗೆ ಅವರು ಖುದ್ದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರುದಲ್ಲಿ ಮಾತನಾಡಿದ ಪರಮೇಶ್ವರ್, “ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾನು ಬರುವ ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರುತ್ತಿತ್ತು. ಸ್ಥಳೀಯ ಶಾಸಕ ಷಡಕ್ಷರಿ ಜೊತೆ ಇದ್ದೆ. ಅವರು ಹೂವು ಹಾಕಲು ಕೋರಿದರು. ರಾಣಿ ಅಬ್ಬಕ್ಕ ಮೆರವಣಿಗೆ ಆದ್ದರಿಂದ ಪುಷ್ಪಾರ್ಚನೆ ಮಾಡಿದೆ ಅಷ್ಟೇ” ಎಂದರು.
ಅವರು ಮುಂದುವರಿದು, “ಯಾರಾದರೂ ಇದನ್ನು ವಿವಾದ ಮಾಡಬೇಕೆಂದರೆ ಮಾಡಲಿ, ನನಗೆ ಯಾವುದೇ ತೊಂದರೆ ಇಲ್ಲ. ನಾನು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ನನಗೆ ಪಕ್ಷದೊಳಗಾಗಲಿ ಹೊರಗಾಗಲಿ ವಿರೋಧಿಗಳು ಇದ್ದಾರೆ. ಆದರೆ ಪರಮೇಶ್ವರ್ ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. 35 ವರ್ಷಗಳಿಂದ ನನ್ನ ರಾಜಕೀಯ ಎಲ್ಲರಿಗೂ ತಿಳಿದಿದೆ. ಅದನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
For More Updates Join our WhatsApp Group :
