ಅಧಿಕಾರಿಗಳ ವಿರುದ್ಧ Yaduveer ಅಸಮಾಧಾನ.

ಅಧಿಕಾರಿಗಳ ವಿರುದ್ಧ Yaduveer ಅಸಮಾಧಾನ.

“ನಮ್ಮ ಮಾತಿಗೆ ಗೌರವ ಇಲ್ಲ” – ಸಂಸದ ಕಿಡಿ

ಮೈಸೂರು : ಮೈಸೂರು ನಗರದ ಅಭಿವೃದ್ಧಿ ಹಾಗೂ ಆಡಳಿತದ ವಿಚಾರದಲ್ಲಿ ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ಸಲಹೆಗಳಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ 63 ಕೋಟಿ ರೂಪಾಯಿ ಯೋಜನೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಮರಗಳನ್ನು ಸ್ಥಳಾಂತರ ಮಾಡಲು ಕೇರಳದ ಎನ್‌ಜಿಒ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಬ್ಬಾಳ ಕೆರೆಯ ಯುಜಿಡಿ ನೀರಿನ ಮಿಶ್ರಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಯದುವೀರ್‌, ಜನಪ್ರತಿನಿಧಿಗಳ ಸಲಹೆಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಂಸಿಸಿ ಕೌನ್ಸಿಲ್ ಇಲ್ಲದೆ ನಿರ್ಧಾರಗಳು ಕೈಗೊಳ್ಳಲಾಗುತ್ತಿದ್ದು, ಇದು ಮೈಸೂರಿನ ಆಡಳಿತಕ್ಕೆ ಮಾರಕವಾಗಿದೆ ಎಂದರು. ಅನಗತ್ಯ ಸಿಗ್ನಲ್ ಲೈಟ್‌ಗಳ ಅಳವಡಿಕೆ ಬಗ್ಗೆಯೂ ಅವರು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಎಂಸಿಸಿ ಚುನಾವಣೆ ನಡೆಸಿ ಜನಪ್ರತಿನಿಧಿಗಳು ಅಧಿಕಾರ ವಹಿಸಿಕೊಳ್ಳಬೇಕು ಎಂದು ಯದುವೀರ್‌ ಒತ್ತಾಯಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *