ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಐದು ವರ್ಷದ ಸಂಬಳವನ್ನು ಮೀಸಲಿಟ್ಟ ಅತ್ಯಂತ ಕಿರಿಯ ಸಂಸದೆ; ಮೆಚ್ಚುಗೆಗೆ ಪಾತ್ರವಾಗುತ್ತಿದೆ ಯುವನಾಯಕಿಯ ನಡೆ

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಐದು ವರ್ಷದ ಸಂಬಳವನ್ನು ಮೀಸಲಿಟ್ಟ ಅತ್ಯಂತ ಕಿರಿಯ ಸಂಸದೆ; ಮೆಚ್ಚುಗೆಗೆ ಪಾತ್ರವಾಗುತ್ತಿದೆ ಯುವನಾಯಕಿಯ ನಡೆ

ಗಂಡಿನಂತೆ ಹೆಣ್ಣು ಕೂಡ ಸಮಾಜದಲ್ಲಿ ಸಮಾನ ಹಕ್ಕನ್ನು ಹೊಂದಿದ್ದು, ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಗಳು ಹೆಚ್ಚು ಒತ್ತು ನೀಡುತ್ತಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ಬಿಹಾರದ ಯುವ ಸಂಸದೆ ಶಾಂಭವಿ ಚೌಧರಿ ತಮ್ಮ ಐದು ವರ್ಷದ ಸಂಬಳವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುವುದಾಗಿ ಘೋಷಿಸುವ ಮೂಲಕ ಮಾದರಿಯಾಗಿದ್ದಾರೆ.

ಬಿಹಾರದ ಸಮಸ್ಠಿಪುರ ಕ್ಷೇತ್ರದ ಸಂಸದೆಯಾಗಿರುವ ಶಾಂಭವಿ ಚೌಧರಿ ಬಿಜೆಪಿಯ ಮಿತ್ರಪಕ್ಷವಾದ ಲೋಕ ಜನಶಕ್ತಿ ಪಾರ್ಟಿಯಿಂದ ಆಯ್ಕೆಯಾಗಿದ್ದು, 26 ವರ್ಷದ ಶಾಂಭವಿ ಲೋಕಸಭೆಗೆ ಆಯ್ಕೆಯಾಗಿರುವ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಸದೆ ಶಾಂಭವಿ ಶಿಕ್ಷಣದಿಂದ ಸಮಸ್ಠಿಪುರದ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಹಣಕಾಸಿನ ಅಡಚಣೆಯಿಂದ ಶಿಕ್ಷಣವನ್ನು ಮೊಟಕುಗೊಳಿಸಲು ಮುಂದಾಗಿರುವ ಹೆಣ್ಣುಮಕ್ಕಳ ಸಹಾಯಕ್ಕಾಗಿ ನಾನು ನಿಲ್ಲುತ್ತೇನೆ. ಸಂಸದೆಯಾಗಿ ನಾನು ಪಡೆಯುವ ಐದು ವರ್ಷದ ಸಂಬಳವನ್ನು ಇದಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಸಚಿವರಾಗಿರುವ ಅಶೋಕ್ ಚೌಧರಿ ಅವರ ಮಗಳಾಗಿರುವ ಶಾಂಭವಿ  ಕಳೆದ ಲೋಕಸಭಾ ಚುನಾವಣೆಯಲ್ಲಿ 1.87 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿ ಗೆಲುವಿನ ನಗೆ ಬೀರಿದ್ದರು.

Leave a Reply

Your email address will not be published. Required fields are marked *