ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬುಧವಾರ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿಯಾದ ಪ್ರಧಾನಿ ಮೋದಿ ಕೆಲ ಹೊತ್ತು ಕುಶಲೋಪರಿ ನಡೆಸಿದರು.
ಈ ಸಂವಾದದ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಪ್ರಧಾನಿ ಮೋದಿ ಅವರ ಚರ್ಮಕಾಂತಿಯ ರಹಸ್ಯವನ್ನು ಪ್ರಶ್ನಿಸಿ ಗಮನ ಸೆಳೆದರು.
“ಸರ್, ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ. ದಯವಿಟ್ಟು ನಿಮ್ಮ ಚರ್ಮದ ಆರೈಕೆ ಹೇಗೆಂದು ತಿಳಿಸುವಿರಾ?” ಹರ್ಲೀನ್ ಡಿಯೋಲ್ ನಗುತ್ತಾ ಕೇಳಿದಳು.
ಹರ್ಲೀನ್ ಡಿಯೋಲ್ ಅವರ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಅಲ್ಲದೆ ಈ ಪ್ರಶ್ನೆಗೆ “ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ” ಎಂದು ಪ್ರಧಾನಿ ಮೋದಿ ಉತ್ತರಿಸಿದರು.
ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಸ್ನೇಹ್ ರಾಣಾ, ನೀವು ಹೀಗೆ ಹೊಳೆಯಲು ಕೋಟ್ಯಂತರ ಭಾರತೀಯರ ಪ್ರೀತಿ ಕಾರಣ ಎಂದರು.
ಸ್ನೇಹ್ ರಾಣಾ ಅವರ ಈ ಉತ್ತರಕ್ಕೆ ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅದು ಸಹ ಇರುತ್ತದೆ… ಇದು ಅತ್ಯಂತ ದೊಡ್ಡ ತಾಕತ್ತು. ನಾನು ಸಮಾಜದೊಂದಿಗೆ (ಸರ್ಕಾರ) ಬೆರತು 25 ವರ್ಷಗಳಾಗಿವೆ. ಅದರ ಪ್ರಭಾವ ಕೂಡ ಇರುತ್ತದೆ. ಜನರ ಇಂತಹ ಆಶೀರ್ವಾದವೇ ನನ್ನನ್ನು ಸದಾ ಮಿಂಚುವಂತೆ ಇರಿಸಿದೆ ಎಂದರು.
For More Updates Join our WhatsApp Group :
