ಬೆಂಗಳೂರು:ದೊಡ್ಡ ಪರದೆಯ ದಿಗ್ಗಜ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು “ಯಜಮಾನ ಅಮೃತ ಮಹೋತ್ಸವ”ವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದರೆ, ಮತ್ತೊಂದು ಕಡೆ ವಿವಾದಗಳ ಮಳೆಯೇ ಸುರಿಯುತ್ತಿದೆ. ಅಭಿಮಾನಿಗಳು ನಿರೀಕ್ಷಿಸಿದ್ದಂತೆ ಹುಟ್ಟುಹಬ್ಬದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇದುವರೆಗೆ ಬೃಹತ್ ಸಮಾರಂಭದ ಯಾವುದೇ ಅಪ್ಡೇಟ್ ನೀಡಲಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವಿಷ – ಅನಿರುದ್ಧ್ ಎಚ್ಚರಿಕೆ
ಇದೀಗ ನಟ ವಿಷ್ಣುವರ್ಧನ್ ಪುತ್ರ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇರಲಾಗುತ್ತಿರುವ ನಿಂದನೆಗಳ ವಿರುದ್ಧ ಗಂಭೀರ ಎಚ್ಚರಿಕೆ ನೀಡಿದ್ದಾರೆ.
“ನಮ್ಮ ಕುಟುಂಬದ ವಿರುದ್ಧ ನಕಾರಾತ್ಮಕ ಕಾಮೆಂಟ್‌ಗಳು ಬಂದಾಗಿನಿಂದಲೇ ನಾನು ಅನೇಕ ಬಾರಿ ಎಚ್ಚರಿಕೆ ನೀಡಿದ್ದೆ. ಸೆಪ್ಟೆಂಬರ್ 16ರಂದು ನಾನು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ. ಪುನರಾವರ್ತನೆ ಆದರೆ ಕಾನೂನು ಕ್ರಮ ತಪ್ಪಲ್ಲ” ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
“ಕೈ ಮುಗಿದು ಕೇಳಿಕೊಳ್ಳ್ತೀನಿ…”
ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದು,
“ಸಾಮಾಜಿಕ ಜಾಲತಾಣದಲ್ಲಿ ಅಥವಾ ವೇದಿಕೆಗಳಲ್ಲಿ ಕುಟುಂಬದ ವಿರುದ್ಧ ಕೆಟ್ಟ ಕಾಮೆಂಟ್‌ಗಳಿಂದ ಸಮಸ್ಯೆ ತಂದುಕೊಳ್ಳಬೇಡಿ. ನಾನು ಮತ್ತೆ ಒಂದುವಾರಿ ಕೈ ಮುಗಿದು ಕೇಳಿಕೊಳ್ಳ್ತೀನಿ – ಇದು ನಿಲ್ಲಿಸಿ.”
“ಅಭಿಮಾನಿ ಮುಖವಾಡದ ಹಿಂದೆ…”
“ಅಭಿಮಾನಿಗಳ ಮುಖವಾಡ ಹಾಕಿಕೊಂಡು ಕೆಲವರು ಈ ಅಪಪ್ರಚಾರ ಮಾಡುತ್ತಿದ್ದಾರೆ. ಇದು ನಿಜವಾದ ಅಭಿಮಾನಿಗಳ ನಡತೆಯಲ್ಲ. ವಿಷ್ಣು ಅವರ ಕೊಡುಗೆಗಳಿಗೆ ಋಣಿಯಾದ ನಾವು, ಇವರಿಂದ ನಿಂದನೆ ಎದುರಿಸಬೇಕು ಎಂಬುದು ವಿಷಾದಕರ” ಎಂದು ಅನಿರುದ್ಧ್ ಹೇಳಿದರು.
ನ್ಯಾಯಾಲಯದ ನಿರ್ಬಂಧ, ಸಮಾಧಿಯ ವಿಚಾರ ಇನ್ನೂ ವಿವಾದದ ಬಿಸಿಲು
- ಅಭಿಮಾನಿ ಸಮೂಹಗಳು ವಿಷ್ಣು ಸಮಾಧಿ ಪ್ರದೇಶದಲ್ಲಿ ಜನ್ಮದಿನ ಆಚರಣೆ ಮಾಡುವ ಪ್ರಯತ್ನ ಮಾಡಿದರೂ, ಕೋರ್ಟ್ನ ನಿರ್ಬಂಧ ಮತ್ತು ಜಾಗದ ನಿರ್ವಾಹಕರ ನಿರಾಕರಣೆ ಕಾರಣ ಈ ಬಾರಿಗೆ ಮಹೋತ್ಸವ ನಡೆಯುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ.
- ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟಿದ ದಿನ, ಅವರು ಬದುಕಿದ್ದರೆ ಈ ಬಾರಿಗೆ ಅಮೃತ ಮಹೋತ್ಸವ (75ನೇ ಜನ್ಮದಿನ) ಆಗುತ್ತಿತ್ತು.
For More Updates Join our WhatsApp Group :




