ಹಾವೇರಿ: ಬ್ಯಾಡಗಿಯ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಕೊಲೆಗೆ ವೃತ್ತಿ ವೈಷಮ್ಯ ಕಾರಣವೋ ಅಥವಾ ಬೇರೆ ಏನಾದರೂ ಇತ್ತೋ ಅಂತ ಬ್ಯಾಡಗಿಯ ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕು. ನುರಿತ ಡ್ಯಾನ್ಸರ್ ಆಗಿದ್ದ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಡ್ಯಾನ್ಸ್ ಮಾಸ್ಟರ್ ಅಂತ ಗುರುತಿಸಿಕೊಂಡಿದ್ದ ಲಿಂಗೇಶ್ ರನ್ನು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಮೋಟೆಬೆನ್ನೂರು ಎಂಬಲ್ಲಿ ಮಧ್ಯಾಹ್ನ ಭೀಕರವಾಗಿ ಕೊಲೆ ಮಾಡಲಾಗಿದೆ.
ಹಂತಕರು ಲಿಂಗೇಶ್ ಕತ್ತು ಕುಯ್ದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಹರಿಹರದಿಂದ ತವರುಮನೆಗೆ ಧಾವಿಸಿದರು. ಲಿಂಗೇಶ್ ತಾಯಿ ಆಘಾತಕ್ಕೊಳಗಾಗಿ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
For More Updates Join our WhatsApp Group :