ತಾಪಮಾನ ಏರಿಕೆಗೆ ತಂಪಿನ ಹುಡುಕಾಟ.
ಮಂಡ್ಯ: ಸುಡು ಬೇಸಿಗೆಯ ಪರಿಣಾಮವಾಗಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎಳನೀರಿಗೆ ಭಾರಿ ಡಿಮ್ಯಾಂಡ್ ಉಂಟಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮಾರುಕಟ್ಟೆಯಲ್ಲಿ ಎಳನೀರು ಕೊರತೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ದಿನಕ್ಕೆ 5–6 ಲಕ್ಷ ಎಳನೀರು ಬರುತ್ತಿದ್ದ ಮಾರುಕಟ್ಟೆಗೆ ಈಗ 1.5–2 ಲಕ್ಷ ಮಾತ್ರ ಬರುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಪೂರೈಕೆ ಕಡಿಮೆಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ನುಸಿ ರೋಗ ಹಾಗೂ ತೀವ್ರ ಬೇಸಿಗೆಯಿಂದ ಎಳನೀರು ಅಕಾಲಿಕವಾಗಿ ಉದುರುತ್ತಿದ್ದು, ಉತ್ಪಾದನೆಗೆ ದೊಡ್ಡ ಹೊಡೆತವಾಗಿದೆ.ಪೂರೈಕೆ ಕಡಿಮೆಯಿಂದ ಮಾರುಕಟ್ಟೆಯಲ್ಲಿ ಎಳನೀರು ಬೆಲೆ ಏರಿಕೆಯಾಗಿದ್ದು, ಒಂದು ಎಳನೀರಿಗೆ ₹50 ರಿಂದ ₹53 ವರೆಗೆ ತಲುಪಿದೆ. ಸಾರಿಗೆ ವೆಚ್ಚದಿಂದ ನಗರಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗಿದೆ.
For More Updates Join our WhatsApp Group :




