ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ನಿಂದ ಮತ್ತೆ ಪುಂಡಾಟ.
ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧೆ ರಜತ್ ಕಿಶನ್ ಮತ್ತೆ ಪುಂಡಾಟ ಮೆರೆದಿದ್ದಾನೆ. ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಿಸಿ ರಿಲ್ಸ್ ಶೂಟ್ ಮಾಡಿದ್ದು, ವಿಡಿಯೋ ಕವರ್ನಲ್ಲಿ ಪೆಟ್ರೋಲ್ ಹಾಕಿ ಸ್ಪೋಟಿಸಿ ವಿಡಿಯೋ ಶೂಟ್ ಮಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಡಿಯೋ ವೈರಲ್ ಆಗಿದೆ.
ಎಲ್ಲಿ ಯಾವಾಗ ಶೂಟ್ ಮಾಡಲಾಯಿತು ಎನ್ನುವ ಮಾಹಿತಿ ಇಲ್ಲ ಮುಂಜಾಗ್ರತ ಕ್ರಮ ಇಲ್ಲದೆ ಸ್ಪೋಟಗೊಳಿಸಿದ್ದಾನೆ. ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಇದೀಗ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.ರಜತ್ ಕಿಶನ್ ಇನ್ಸ್ಟಾಗ್ರಾಮ್ ಅಲ್ಲಿ ನಿನ್ನೆ ಒಂದು ರೀಲ್ಸ್ ಪೋಸ್ಟ್ ಮಾಡಿದ್ದು, ಆ ಒಂದು ವಿಡಿಯೋದಲ್ಲಿ ಕ್ಯಾಪ್ಶನ್ ನಲ್ಲಿ ಇದು ಸುಮ್ಮನೆ ತಮಾಷೆಗೆ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಕೇಸ್ ಹಾಕಬೇಡರಪ್ಪ ಎಂದು ರಜತ್ ಕಿಶನ್ ಅವರು ಬರೆದುಕೊಂಡಿದ್ದಾರೆ. ಇದೀಗ ಆ ಒಂದು ವಿಡಿಯೋ ಹಾಗೂ ಅವರು ಬರೆದಿರುವ ಕ್ಯಾಪ್ಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಒಂದು ವಿಡಿಯೋದಲ್ಲಿ ಕೆಜಿಎಫ್ ನಲ್ಲಿ ನಟ ಯಶ್ ಅವರ ಡೈಲಾಗ್ ಬಳಸಿ ರಿಲ್ಸ್ ಮಾಡಿದ್ದು ರಜತ್ ಬೈಕ್ ಮೇಲೆ ಎಂಟ್ರಿ ಕೊಡುವ ದೃಶ್ಯದಲ್ಲಿ ಹಿಂದೆ ಪೆಟ್ರೋಲ್ ಬಾಂಬ್ ಮಾದರಿ ಸ್ಪೋಟಿಸಿ ಬೆಂಕಿಯ ದೃಶ್ಯಗಳು ಇವೆ. ಹಾಗಾಗಿ ರಜತ್ ಕಿಶನ್ ಅವರು ಇದು ಸುಮ್ನೆ ತಮಾಷೆಗಾಗಿ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಬಂದು ಕೇಸ್ ಹಾಕ್ಬೇಡ್ರಪ್ಪೋ ಎಂದು ಮನವಿ ಮಾಡಿಕೊಂಡಿದ್ದಾರೆ. ಕೆಲವರು ವಿಡಿಯೋಗಿಂತ ಕ್ಯಾಪ್ಶನ್ ಸಕತ್ತಾಗಿದೆ ಎಂದು ತಮಾಷೆ ಮಾಡಿದ್ರೆ ಇನ್ನೂ ಕೆಲವರು ಪರಿಸರ ಹಾನಿ, ಸಾರ್ವಜನಿಕರಿಗೆ ಕಿರಿಕಿರಿ ಅಂತ ಯಾರಾದರೂ ಹಾಕಿದ್ರೆ ಹೇಗೆ ಅಂತ ರಜತ್ ಕಿಶನ್ ಅವರ ಕಾಲು ಎಳೆದಿದ್ದಾರೆ.
For More Updates Join our WhatsApp Group :




