ಯೂನಿಫಾರ್ಮ್‌ನಲ್ಲಿ ಫ್ಯಾಮಿಲಿ ಶೋಕಿ: ಇನ್ಸ್ಪೆಕ್ಟರ್ ವಿರುದ್ಧ ಟೀಕೆ.

ಯೂನಿಫಾರ್ಮ್‌ನಲ್ಲಿ ಫ್ಯಾಮಿಲಿ ಶೋಕಿ: ಇನ್ಸ್ಪೆಕ್ಟರ್ ವಿರುದ್ಧ ಟೀಕೆ.

ಇನ್ಸ್‌ಪೆಕ್ಟರ್ ಜೈ ಕುಮಾರ್ ವಿಡಿಯೋ ವೈರಲ್

ಚಾಮರಾಜನಗರ : ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ ಶೋಕಿ ಮಾಡುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್  ಜೈ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಓಪನ್ ಜೀಪ್‌ನಲ್ಲಿ ಸುತ್ತಾಡಿ ಈಗ ಸುದ್ದಿಯಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಬಳಿಯಿರುವ ಇಕ್ರಮ್ ಸಿದ್ದಿಕಿ ಫಾರ್ಮ್ ಹೌಸ್ ಸುತ್ತಮುತ್ತ ಇನ್ಸ್‌ಪೆಕ್ಟರ್ ಜೈ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಿಂದಾಸ್ ಆಗಿ ರೌಂಡ್ಸ್ ಹಾಕಿದ್ದಾರೆ. ಈ ಪ್ರದೇಶವು ಬಫರ್ ಝೋನ್ (ಕಾಡಂಚಿನ ಪ್ರದೇಶ) ವ್ಯಾಪ್ತಿಗೆ ಬರುತ್ತದೆ. ಕೇವಲ ಫ್ಯಾಮಿಲಿ ಜೊತೆ ಸುತ್ತಾಡಿದ್ದು ಮಾತ್ರವಲ್ಲದೆ, ಆ ವಿಡಿಯೋಗೆ ಸಖತ್ ಬಿಲ್ಡಪ್ ನೀಡುವ ಸಾಂಗ್ ಏಡಿಟ್​​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸ್ ಸಮವಸ್ತ್ರದ ಘನತೆಯನ್ನು ಮರೆತು, ಕಾಡಂಚಿನ ಪ್ರದೇಶದಲ್ಲಿ ಶೋಕಿ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ಇಲಾಖೆಯ ವಾಹನ ಮತ್ತು ಸಮವಸ್ತ್ರವನ್ನು ವೈಯಕ್ತಿಕ ಪ್ರಚಾರಕ್ಕೆ ಹಾಗೂ ಫ್ಯಾಮಿಲಿ ಪ್ರವಾಸಕ್ಕೆ ಬಳಸಿಕೊಂಡಿರುವ ಇನ್ಸ್‌ಪೆಕ್ಟರ್ ನಡೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *