ತ್ಯಾಜ್ಯ ನಿರ್ವಹಣೆ ಕುರಿತ ಮಹತ್ವದ ಸಭೆ.
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಯುಕ್ತರು ಅಧಿಕಾರಿಗಳಿಗೆ ಈ ಕೆಳಗಿನ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು:
ಬೃಹತ್ ತ್ಯಾಜ್ಯ ಉತ್ಪಾದಕರರ ಪಟ್ಟಿ ಮಾಡಿ:ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರ ಸಮೀಕ್ಷೆ ನಡೆಸಿ, ಅಧಿಕೃತ ಎಂಪನೆಲ್ಡ್ ವೆಂಡರ್‌ಗಳ ಮೂಲಕವೇ ಕಸ ಸಂಗ್ರಹಣೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದರು.
ಹಾಜರಾತಿ ಮತ್ತು ಮೇಲ್ವಿಚಾರಣೆ:ಪ್ರತಿನಿತ್ಯ ಆಟೋ ಟಿಪ್ಪರ್‌ಗಳು (ATs) ಮತ್ತು ಕಾಂಪಾಕ್ಟರ್‌ಗಳ ಕಾರ್ಯಕ್ಷಮತೆ ಹಾಗೂ ಮಾರ್ಷಲ್‌ಗಳು, ಲಿಂಕ್ ವರ್ಕರ್ಸ್, ಪಿಕೆಗಳ (ಪೌರಕಾರ್ಮಿಕರು) ಮೇಲ್ವಿಚಾರಕರ ಹಾಜರಾತಿ ಮತ್ತು ಜವಾಬ್ದಾರಿಗಳ ಕುರಿತು ನಿರ್ದೇಶನ ನೀಡಿದರು.
ತೃಪ್ತಿಕರವಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ:ಸಾರ್ವಜನಿಕರ ಹಿತದೃಷ್ಟಿಯಿಂದ ತೃಪ್ತಿಕರವಾಗಿ ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ವಜಾಗೊಳಿಸಲು ಸೂಚಿಸಿದರು. ಮತ್ತು ರಸ್ತೆಗಳಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲು ನಿರ್ದೇಶನ ನೀಡಿದರು.
ಪ್ಲಾಸ್ಟಿಕ್ ಮುಕ್ತ ನಗರಗೊಳಿಸಿ: ಏಕಬಳಕೆಯ ಪ್ಲಾಸ್ಟಿಕ್ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಅಂಗಡಿ ಮುಗ್ಗಟ್ಟುಗಳ ಮೇಲೆ ಆಗಿಂದಾಗ್ಗೆ ದಾಳಿ ಮಾಡಲು ಸೂಚಿಸಿದರು. ಸಾರ್ವಜನಿಕರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸುವಂತೆ ಸೂಚಿಸಿದರು.
For More Updates Join our WhatsApp Group :




