ಹುದ್ದೆಯೋ ನಗರವೋ? IT ಜಾಬ್ ಗೊಂದಲ.!

ಹುದ್ದೆಯೋ ನಗರವೋ? IT ಜಾಬ್ ಗೊಂದಲ.!

ಎರಡು ನಗರ, ಎರಡು ಹುದ್ದೆ — ಒಂದೇ ಸಂಬಳ

ಬೆಂಗಳೂರು: ಐಟಿ ವಲಯದಲ್ಲಿ ಉದ್ಯೋಗಿಯೊಬ್ಬರಿಗೆ ಕಂಪನಿಯು ನೀಡಿದ ವಿಚಿತ್ರ ಆಫರ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.ಎಂಟು ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ  ‘ಸೀನಿಯರ್ ಮ್ಯಾನೇಜರ್’ ಹುದ್ದೆಗೆ ಸಂದರ್ಶನ ನೀಡಿದ್ದರು. ಅಭ್ಯರ್ಥಿಯು ವೈಯಕ್ತಿಕ ಕಾರಣಗಳಿಂದಾಗಿ ಬೆಂಗಳೂರಿನಲ್ಲೇ ಇರಲು ಬಯಸಿದ್ದರು. ಆದರೆ, ಕಂಪನಿಯು ಅವರ ಮುಂದೆ ಎರಡು ವಿಚಿತ್ರ ಆಯ್ಕೆಗಳನ್ನು ಇಟ್ಟಿದೆ. ಒಂದು ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’ ಹುದ್ದೆ, ಎರಡನೇಯದ್ದು, ಬೆಂಗಳೂರಿನಲ್ಲೇ ಇರಬೇಕೆಂದರೆ ‘ಮ್ಯಾನೇಜರ್’ ಹುದ್ದೆ. ಈಗ ಈ ವ್ಯಕ್ತಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಎರಡೂ ಆಯ್ಕೆಗಳಲ್ಲಿ ಸಂಬಳ ಒಂದೇ ಆಗಿರುತ್ತದೆ! ಕಂಪನಿಯ ಪ್ರಕಾರ, ಎರಡೂ ಕೆಲಸಗಳು ಒಂದೇ ರೀತಿಯದ್ದಾಗಿದ್ದರೂ, ಬೆಂಗಳೂರಿನಲ್ಲಿ ಸದ್ಯಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ ಇಲ್ಲದ ಕಾರಣ ಈ ‘ಟೈಟಲ್ ಹಿಟ್’ ಅನಿವಾರ್ಯ ಎಂದಿದೆ.ಈ ಗೊಂದಲಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

 “ಹೈದರಾಬಾದ್‌ಗೆ ತೆರಳುವುದು ಉತ್ತಮ. ಬೆಂಗಳೂರಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದಿನ ಹತ್ತು ವರ್ಷ ಅಲ್ಲಿ ಯಾವುದೇ ಭರವಸೆ ಇಲ್ಲ. ಉತ್ತಮ ಜೀವನ ಗುಣಮಟ್ಟಕ್ಕಾಗಿ ಹೈದರಾಬಾದ್ ಆರಿಸಿಕೊಳ್ಳಿ” ಎಂದು ಒಬ್ಬರು ಸಲಹೆ ನೀಡಿದ್ದಾರೆ. ಮುಂದಿನ ಕೆಲಸದ ಸಂದರ್ಶನಗಳಲ್ಲಿ ಹುದ್ದೆಯ ಹೆಸರು ಮುಖ್ಯವಾಗುತ್ತದೆ. ಒಂದು ವೇಳೆ ಬೆಂಗಳೂರನ್ನೇ ಆರಿಸಿಕೊಂಡರೆ, ಸಂಬಳ ಮತ್ತು ಜವಾಬ್ದಾರಿ ಒಂದೇ ಆಗಿದ್ದರೂ ಟೈಟಲ್ ಮಾತ್ರ ಬದಲಾಗಿದೆ ಎಂಬ ಬಗ್ಗೆ ಕಂಪನಿಯಿಂದ ಲಿಖಿತ ದಾಖಲೆ ಪಡೆದುಕೊಳ್ಳಿ” ಎಂದಿದ್ದಾರೆ. “ಕೇವಲ ಹುದ್ದೆಯ ಹೆಸರಿಗಾಗಿ ಚೆನ್ನಾಗಿರುವ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳಬೇಡಿ. ಸಂಬಳ ಒಂದೇ ಇರುವಾಗ ನಿಮಗೆ ಇಷ್ಟವಾದ ನಗರದಲ್ಲೇ ಇರಿ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, “ಕೇವಲ 8 ವರ್ಷದ ಅನುಭವಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆ ಸಿಗುತ್ತದೆಯೇ? ಮತ್ತು ಮ್ಯಾನೇಜರ್ ಆಗಿ ಒಬ್ಬರೇ ಕೆಲಸ ಮಾಡುವ ಜವಾಬ್ದಾರಿ ಏಕೆ?” ಎಂಬ ಕುತೂಹಲಕಾರಿ ಪ್ರಶ್ನೆಗಳನ್ನೂ ಎತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *