ಧಾರವಾಡ : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಾಲಭಾದೆಯಿಂದ ನರಳಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಇಬ್ಬರು ರೈತರ ಮನೆಗಳಿಗೆ ಭೇಟಿ ನೀಡಿ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಎರಡೂ ಕುಟುಂಬಗಳಿಗೆ ತಮ್ಮ ಸಂತೋಷ್ ಲಾಡ್ ಪ್ರತಿಷ್ಠಾನದಿಂದ ಸಚಿವ ತಲಾ ಎರಡೂವರೆ ಲಕ್ಷ ರೂ. ಗ ಚೆಕ್ ನೀಡುವಂತೆ ಅವರು ತಮ್ಮ ಆಪ್ತ ಕಾರ್ಯದರ್ಶಿಗೆ ಫೋನ್ ಮಾಡಿ ಹೇಳಿದರಲ್ಲದೆ ರೈತರು ತೆಗೆದುಕೊಂಡಿರುವ ಸಾಲವನ್ನು ತಾವ ಭರಿಸುವ ಭರವಸೆಯನ್ನು ಕುಟುಂಬಗಳಿಗೆ ನೀಡಿದರು.