ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ಮನೆಯಲ್ಲಿರುವ ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದೆ. ಸೈಯದ್ ನೂರ್ ಹತ್ತು ನಾಟಿ ಕೋಳಿ ಸಾಕಿದ್ದು, ಮಾಮೂಲಾಗಿ ಬಿಳಿ ಮೊಟ್ಟೆ ಇಡುತ್ತಿದ್ದ ಒಂದು ನಾಟಿ ಕೋಳಿ ನೀಲಿ ಮೊಟ್ಟೆ ಇಟ್ಟಿದೆ.
ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕೂಡ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮೊಟ್ಟೆಯ ಮೇಲ್ಭಾಗ ಮಾತ್ರ ನೀಲಿ ಇದ್ದು, ಉಳಿದಂತೆ ಮಾಮೂಲಾಗಿ ಇದೆ. ಒಂದು ವೇಳೆ ಕೋಳಿ ಮುಂದೆ ನಿರಂತರವಾಗಿ ನೀಲಿ ಮೊಟ್ಟೆ ಹಾಕಿದರೆ ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಶೋಕ ತಿಳಿಸಿದ್ದಾರೆ.
For More Updates Join our WhatsApp Group :