“ಮೋತಿ” ಸಮುದಾಯದ ಶ್ವಾನಗಳ ದತ್ತು ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ” (MOTI) – Movement of Trust & Inclusion ಎಂಬ ವಿಶಿಷ್ಟ ಸಹಜೀವನವನ್ನು ಉತ್ತೇಜಿಸುವ ಉಪಕ್ರಮ ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ *ಇಂದು ಕಬ್ಬನ್ ಪಾರ್ಕ್ ನಲ್ಲಿ ಬೆಳಿಗ್ಗೆ 8.00 ಗಂಟೆಗೆ ಸಮುದಾಯದ ಶ್ವಾನಗಳನ್ನು ಸಾರ್ವಜನಿಕರು ದತ್ತು ಪಡೆಯಲು ಶ್ವಾನಗಳಲ್ಲಿ ಸಹಾನುಭೂತಿ ಮತ್ತು ಸಹಜೀವನವನ್ನು ಉತ್ತೇಜಿಸಲು ಆಯೋಜಿಸಲಾದ “ಮೋತಿ” ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.*
ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ತಣಿಕೊಳ್ಳಲು ಬೌಲ್ ನಲ್ಲಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು ಸಮುದಾಯ ಶ್ವಾನಗಳಿಗೆ ಬಾಯಾರಿಕೆಯಾದಾಗ ಕೇಳಲು ಮನುಷ್ಯನಂತೆ ಕೇಳಲು ಬಾಯಿ ಇರುವುದಿಲ್ಲ ಆದ್ದರಿಂದ ತಮ್ಮ ತಮ್ಮ ಮನೆಯ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ವಾನಗಳಿಗೆ ಬಾಯಾರಿಕೆಯನ್ನು ನೀಗಿಸಲು ಒಂದು ಪಾತ್ರೆಯಲ್ಲಿ ನೀರನ್ನು ಇಡಲು ಕೋರಿದರು. *ಕೇಂದ್ರ ನಗರ ಪಾಲಿಕೆಯ ವತಿಯಿಂದ ನೀಡಲಾಗುವ “ಮೋತಿ” ಶ್ವಾನಗಳನ್ನು ದತ್ತು ಪಡೆಯಲು ಅವರು ಮನವಿ ಮಾಡಿದರು.*
ಕಂದಾಯ ಅಪರ ಆಯುಕ್ತರಾದ ಕೆ.ರಂಗನಾಥ್ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ *(Dogathon) ಡಾಗ್ ಥಾನ್* ಚಾಲನೆ ನೀಡಿದರು. ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು, ಮಕ್ಕಳು ಸಮುದಾಯದ ಶ್ವಾನಗಳೊಂದಿಗೆ ಸಂಕೇತಾತ್ಮಕ (ಡಾಗಥಾನ್) ಕಾಲ್ನಡಿಗೆ ಜಾಥಾವನ್ನು ಪಾಲ್ಗೊಂಡಿದ್ದರು.
ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಸಮುದಾಯದ 4 ಶ್ವಾನಗಳನ್ನು (Indie Dogs) ಸಾರ್ವಜನಿಕರು ದತ್ತು ಪಡೆದುಕೊಂಡರು. ಈ ಸಂದರ್ಭದಲ್ಲಿ ಅಗತ್ಯ ಲಸಿಕೆಗಳನ್ನು ನೀಡಿ, ಶ್ವಾನಗಳಿಗೆ ಆಹಾರ ಕಿಟ್ ಕುತ್ತಿಗೆ ಪಟ್ಟಿ, ಚೈನ್, ವಾಟರ್ ಬೌಲ್ ಒಳಗೊಂಡ ಕಿಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಶು ಪಾಲನೆ ಸಹಾಯಕ ನಿರ್ದೇಶಕ ಬಸವರಾಜೇಂದ್ರ ಬಿರಾದಾರ, ಹೆಚ್.ಓ.ಡಿ. ವೀಣಾ, ಇತರೆ ನಗರ ಪಾಲಿಕೆಗಳ ಸಹಾಯಕ ನಿರ್ದೇಶಕರು, ಎನ್.ಜಿಓ ಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಮಕ್ಕಳು ಭಾಗವಹಿಸಿದ್ದರು.
For More Updates Join our WhatsApp Group :




