ತರಕಾರಿ ದರದಲ್ಲಿ ಭಾರಿ ಏರಿಕೆ – ಬೆಂಗಳೂರಿನಲ್ಲಿ ಗ್ರಾಹಕರಿಗೆ ತೀವ್ರ ಹೊರೆ

ತರಕಾರಿ ದರದಲ್ಲಿ ಭಾರಿ ಏರಿಕೆ – ಬೆಂಗಳೂರಿನಲ್ಲಿ ಗ್ರಾಹಕರಿಗೆ ತೀವ್ರ ಹೊರೆ

ಬೀನ್ಸ್ ಬೆಲೆ 2 ಪಟ್ಟು ಏರಿಕೆ – ಗ್ರಾಹಕರು ಕಂಗಾಲು

ಬೆಂಗಳೂರು : ಮಾರುಕಟ್ಟೆಯಲ್ಲಿ ತರಕಾರಿ ದರಗಳು ದಿಢೀರನೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ. ವಿಶೇಷವಾಗಿ ಬೀನ್ಸ್ ದರ ಕೇವಲ ಎರಡು ವಾರಗಳಲ್ಲಿ ಕೆಜಿಗೆ ₹60 ರಿಂದ ₹160ಕ್ಕೆ ಏರಿಕೆಯಾಗಿದೆ.ಈಗ ₹500 ಖರ್ಚು ಮಾಡಿದರೂ ಎರಡು ಚೀಲ ತರಕಾರಿ ತುಂಬಿಸುವುದು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಹೇಳಿದ್ದಾರೆ. ಹೋಟೆಲ್ ತಿಂಡಿ ಬೆಲೆ ಏರಿಕೆಯ ಬೆನ್ನಲ್ಲೇ ತರಕಾರಿ ದರ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ತೀವ್ರ ಬಿಸಿಲು ಹಾಗೂ ಅಕಾಲಿಕ ಮಳೆಯ ಪರಿಣಾಮವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಪ್ರಮುಖ ತರಕಾರಿ ಉತ್ಪಾದನಾ ಜಿಲ್ಲೆಗಳಲ್ಲಿ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದ ಪೂರೈಕೆ ಶೇ 30–40ರಷ್ಟು ಕುಸಿದಿದೆ.ಮದುವೆ, ಹಬ್ಬಗಳ ಸೀಸನ್‌ನಿಂದ ತರಕಾರಿ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆ ಇನ್ನಷ್ಟು ವೇಗವಾಗಿದೆ.ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ತರಕಾರಿ ತರಿಸುವ ಸಾರಿಗೆ ವೆಚ್ಚವೂ ಹೆಚ್ಚಳಕ್ಕೆ ಕಾರಣವಾಗಿದ್ದು, ಒಟ್ಟಾರೆ ಮಾರುಕಟ್ಟೆ ದರಗಳು ಗಗನಕ್ಕೇರಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *