ವರ್ಷಕ್ಕೊಮ್ಮೆ ಕಾಣುವ ಪ್ರಕೃತಿ ವಿಸ್ಮಯಕ್ಕೆ ಭಕ್ತರ ಮನಸೋತು.
ಹಾಸನ: ಜಿಲ್ಲೆಯ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಸೂರ್ಯ ಕಿರಣಾಭಿಷೇಕ ಈ ವರ್ಷವೂ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದೆ.ಸುಮಾರು ಬೆಳಿಗ್ಗೆ 6:15ಕ್ಕೆ ಸೂರ್ಯರಶ್ಮಿಗಳು ಮುಖ್ಯ ದ್ವಾರದಿಂದ ಪ್ರವೇಶಿಸಿ ಗರ್ಭಗುಡಿಯಲ್ಲಿ ಶ್ರೀ ಚನ್ನಕೇಶವಸ್ವಾಮಿಯ ವಿಗ್ರಹವನ್ನು ಸ್ಪರ್ಶಿಸಿದ ದೃಶ್ಯ ಕಾಣಿಸಿತು.
ಈ ಘಟನೆ ಹೊಯ್ಸಳ ಶಿಲ್ಪಿಗಳ ಗಣಿತ ಹಾಗೂ ಖಗೋಳ ಜ್ಞಾನಕ್ಕೆ ಸಾಕ್ಷಿಯಾಗಿದ್ದು, ದೇವಾಲಯದ ವಾಸ್ತು ವಿನ್ಯಾಸದ ವೈಶಿಷ್ಟ್ಯತೆಯನ್ನು ತೋರಿಸುತ್ತದೆ.ಬೇಲೂರಿನ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮುಗಿದ ನಂತರ ಮಾತ್ರ ಈ ಸೂರ್ಯ ಕಿರಣ ಪ್ರವೇಶವಾಗುವುದು ಈ ಘಟನೆಯ ಮತ್ತೊಂದು ವಿಶೇಷತೆ.
ವರ್ಷಕ್ಕೊಮ್ಮೆ ನಡೆಯುವ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.
For More Updates Join our WhatsApp Group :




