ಸಿಬ್ಬಂದಿ ಸೋಗಿನಲ್ಲಿ ಕಳ್ಳತನ: ಅಂತಾರಾಜ್ಯ ಗ್ಯಾಂಗ್ ಬಂಧನ.!

ಸಿಬ್ಬಂದಿ ಸೋಗಿನಲ್ಲಿ ಕಳ್ಳತನ: ಅಂತಾರಾಜ್ಯ ಗ್ಯಾಂಗ್ ಬಂಧನ.!

ಯಶವಂತಪುರ ಪೊಲೀಸರ ಬಿಗ್ ಆಪರೇಷನ್.

ಬೆಂಗಳೂರು: ಯಶವಂತಪುರ ಪೊಲೀಸರು ಬಿಎಸ್‌ಎನ್‌ಎಲ್ ಮಾಡ್ಯೂಲ್‌ಗಳು ಮತ್ತು ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದವರಾದ ರವಿ ಚೌಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂಬುವವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಈ ಖದೀಮರು ಬಿಎಸ್‌ಎನ್‌ಎಲ್ ಸಿಬ್ಬಂದಿಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದರು. ಕಳ್ಳತನಕ್ಕಾಗಿ ನೀಲಿ ಸಮವಸ್ತ್ರವನ್ನು ಧರಿಸಿ ರಿಪೇರಿ ಕೆಲಸದ ನೆಪದಲ್ಲಿ ಬರುತ್ತಿದ್ದರು.

ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಬಿಎಸ್‌ಎನ್‌ಎಲ್ ಟೆಲಿಫೋನ್ ಮತ್ತು ಇಂಟರ್ನೆಟ್ LAN ಕೇಬಲ್‌ಗಳನ್ನು ಹೊಂದಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಒಡೆದು ತಂತಿಗಳನ್ನು ಕದಿಯುತ್ತಿದ್ದರು. ಆರೋಪಿಗಳು ಕಳ್ಳತನಕ್ಕಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಕೃತ್ಯದ ನಂತರ ಕದ್ದ ಮಾಲುಗಳೊಂದಿಗೆ ರೈಲಿನಲ್ಲಿ ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಿನಕ್ಕೊಂದು ರಾಜ್ಯದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುವುದು ಇವರ ಕೃತ್ಯವಾಗಿತ್ತು. ಆದರೆ ಯಶವಂತಪುರ ಪೊಲೀಸರು ಈ ಅಂತರರಾಜ್ಯ ಕಳ್ಳರ ತಂಡವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *