SSLC ಫಲಿತಾಂಶ Rank ಲಿಸ್ಟ್ ಬಿಡುಗಡೆ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​?

SSLC ಫಲಿತಾಂಶ Rank ಲಿಸ್ಟ್ ಬಿಡುಗಡೆ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​?

ಶೇ.94.1 ಫಲಿತಾಂಶ ದಾಖಲೆ – 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ, ಜಿಲ್ಲಾವಾರು ಫಲಿತಾಂಶ ಪ್ರಕಟ

ಬೆಂಗಳೂರು : 2025-26ನೇ ಸಾಲಿನ  SSLC ಪರೀಕ್ಷೆ ಫಲಿತಾಂಶ ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್​​ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.

ದಕ್ಷಿಣ ಕನ್ನಡ ಫಸ್ಟ್​​, ಕಲಬುರಗಿ ಲಾಸ್ಟ್​​

ಈ ಬಾರಿಯ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ  ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಫಲಿತಾಂಶ

  1. ದಕ್ಷಿಣ ಕನ್ನಡ ಜಿಲ್ಲೆ- 98.40%
  2. ಉಡುಪಿ – 98.18%
  3. ಉತ್ತರ ಕನ್ನಡ- 98.09%
  4. ಹಾಸನ- 97.51%
  5. ಮಂಡ್ಯ- 97.45%
  6. ಶಿರಸಿ- 97.21%
  7. ಹಾವೇರಿ- 96.87%
  8. ಕೊಡಗು- 96.70%
  9. ಶಿವಮೊಗ್ಗ- 96.56%
  10. ವಿಜಯನಗರ- 96.39%
  11. ಬೆಂಗಳೂರು ಗ್ರಾಮಾಂತರ – 95.84%
  12. ಧಾರವಾಡ – 95.59%
  13. ಕೋಲಾರ- 95.50%
  14. ಬಾಗಲಕೋಟೆ- 95.42%
  15. ಬೆಂಗಳೂರು ಉತ್ತರ- 95.34%
  16. ಗದಗ- 95.24%
  17. ಚಿಕ್ಕಮಗಳೂರು- 94.99%
  18. ಬೆಳಗಾವಿ – 94.75%
  19. ದಾವಣಗೆರೆ- 94.64%
  20. ಮೈಸೂರು- 94.50%
  21. ರಾಯಚೂರು- 94.41%
  22. ವಿಜಯಪುರ- 94.17%
  23. ಚಿಕ್ಕೋಡಿ- 94.09%
  24. ಬಳ್ಳಾರಿ- 93.36%
  25. ಕೊಪ್ಪಳ- 93.10%
  26. ರಾಮನಗರ- 92.83%
  27. ಚಿತ್ರದುರ್ಗ- 92.25%
  28. ಬೀದರ್- 92.18%
  29. ತುಮಕೂರು- 92.04%
  30. ಚಾಮರಾಜನಗರ- 91.89%
  31. ಯಾದಗಿರಿ- 91.89%
  32. ಬೆಂಗಳೂರು ದಕ್ಷಿಣ- 91.65%
  33. ಚಿಕ್ಕಬಳ್ಳಾಪುರ- 90.88%
  34. ಮಧುಗಿರಿ- 90.26%
  35. ಕಲಬುರಗಿ-85.06%

7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

SSLC ಪರೀಕ್ಷೆಯಲ್ಲಿ ಬರೋಬ್ಬರಿ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್​, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ವಿದ್ಯಾರ್ಥಿ ಸುಖದೇವ್​ಗೆ​ ಸಂಪೂರ್ಣ ಅಂಕ ದೊರೆತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *