ಶೇ.94.1 ಫಲಿತಾಂಶ ದಾಖಲೆ – 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ, ಜಿಲ್ಲಾವಾರು ಫಲಿತಾಂಶ ಪ್ರಕಟ
ಬೆಂಗಳೂರು : 2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಏಪ್ರಿಲ್ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.94.1 ಮಂದಿ ಪಾಸ್ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.
ದಕ್ಷಿಣ ಕನ್ನಡ ಫಸ್ಟ್, ಕಲಬುರಗಿ ಲಾಸ್ಟ್
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲಾವಾರು ಫಲಿತಾಂಶ
- ದಕ್ಷಿಣ ಕನ್ನಡ ಜಿಲ್ಲೆ- 98.40%
- ಉಡುಪಿ – 98.18%
- ಉತ್ತರ ಕನ್ನಡ- 98.09%
- ಹಾಸನ- 97.51%
- ಮಂಡ್ಯ- 97.45%
- ಶಿರಸಿ- 97.21%
- ಹಾವೇರಿ- 96.87%
- ಕೊಡಗು- 96.70%
- ಶಿವಮೊಗ್ಗ- 96.56%
- ವಿಜಯನಗರ- 96.39%
- ಬೆಂಗಳೂರು ಗ್ರಾಮಾಂತರ – 95.84%
- ಧಾರವಾಡ – 95.59%
- ಕೋಲಾರ- 95.50%
- ಬಾಗಲಕೋಟೆ- 95.42%
- ಬೆಂಗಳೂರು ಉತ್ತರ- 95.34%
- ಗದಗ- 95.24%
- ಚಿಕ್ಕಮಗಳೂರು- 94.99%
- ಬೆಳಗಾವಿ – 94.75%
- ದಾವಣಗೆರೆ- 94.64%
- ಮೈಸೂರು- 94.50%
- ರಾಯಚೂರು- 94.41%
- ವಿಜಯಪುರ- 94.17%
- ಚಿಕ್ಕೋಡಿ- 94.09%
- ಬಳ್ಳಾರಿ- 93.36%
- ಕೊಪ್ಪಳ- 93.10%
- ರಾಮನಗರ- 92.83%
- ಚಿತ್ರದುರ್ಗ- 92.25%
- ಬೀದರ್- 92.18%
- ತುಮಕೂರು- 92.04%
- ಚಾಮರಾಜನಗರ- 91.89%
- ಯಾದಗಿರಿ- 91.89%
- ಬೆಂಗಳೂರು ದಕ್ಷಿಣ- 91.65%
- ಚಿಕ್ಕಬಳ್ಳಾಪುರ- 90.88%
- ಮಧುಗಿರಿ- 90.26%
- ಕಲಬುರಗಿ-85.06%
7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
SSLC ಪರೀಕ್ಷೆಯಲ್ಲಿ ಬರೋಬ್ಬರಿ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ವಿದ್ಯಾರ್ಥಿ ಸುಖದೇವ್ಗೆ ಸಂಪೂರ್ಣ ಅಂಕ ದೊರೆತಿದೆ.
For More Updates Join our WhatsApp Group :




