ಸಿದ್ದಗಂಗಾ ಮಠಕ್ಕೆ yuvaraj kumar : Appu ಹಾದಿಯಲ್ಲಿ ಯುವ

ಸಿದ್ದಗಂಗಾ ಮಠಕ್ಕೆ yuvaraj kumar : Appu ಹಾದಿಯಲ್ಲಿ ಯುವ

ಯುವ ರಾಜ್ಕುಮಾರ್ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದು, ಸದ್ಯ ತಮ್ಮ ಎರಡನೇ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ‘ಯುವ’ ಸಿನಿಮಾ ಬಳಿಕ ಬಣ್ಣ ಹಚ್ಚಿರುವ ‘ಎಕ್ಕ’ ಚಿತ್ರ ತೆರೆಕಾಣಲು ಸಜ್ಜಾಗಿದ್ದು, ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಗಮನ ಸೆಳೆದಿದ್ದಾರೆ.

ದೊಡ್ಮನೆ ಕುಡಿ ಎಂದೇ ಕರೆಸಿಕೊಳ್ಳುವ ಯುವ ರಾಜ್ಕುಮಾರ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಟೀಸರ್, ಟೈಟಲ್ ಟ್ರ್ಯಾಕ್, ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಎಕ್ಕ ಚಿತ್ರ ಇತ್ತೀಚೆಗಷ್ಟೇ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಇನ್ನೊಂದು ತಿಂಗಳಲ್ಲಿ ಎಕ್ಕ ಚಿತ್ರಮಂದಿರ ಪ್ರವೇಶಿಸಲಿದ್ದು, ತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಈ ಹೊತ್ತಲ್ಲಿ ನಾಯಕ ನಟ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ತಮ್ಮ ಸಿನಿಮಾ ಯಶಸ್ಸಿಗೆ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಸಿದ್ದಗಂಗಾ ಮಠಕ್ಕೆ ಯುವ ರಾಜ್ಕುಮಾರ್ ಭೇಟಿ ಕೊಟ್ಟಿರುವ ಫೋಟೋ ವಿಡಿಯೋಗಳು ವೈರಲ್ ಆಗುತ್ತಿವೆ. ನಟ ಕಾರಿನಿಂದ ಇಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಬಂದು ಯುವನನ್ನು ಸುತ್ತುವರೆದಿರೋದನ್ನು ಕಾಣಬಹುದು. ‘ಅಪ್ಪನ ಹಾದಿಯಲ್ಲಿ ಮಗ’ ಎಂದು ಪುನೀತ್ ರಾಜ್ಕುಮಾರ್ಗೆ ಹೋಲಿಸಿ ಪೋಸ್ಟ್ಗಳನ್ನು ಶೇರ್ ಮಾಡಲಾಗುತ್ತಿದೆ. ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ‘ಅಪ್ಪು ಸರ್ ಬಂದ ಹಾಗೆ ಅನಿಸಿತು’ ಎಂದು ತಿಳಿಸಿದ್ದಾರೆ. ‘ಒಂದು ಕ್ಷಣ ಅಪ್ಪು ಬಾಸ್ ನೆನಪಾದರು, ಲವ್ ಯು ಅಪ್ಪು ಬಾಸ್, ಯುವ ಸರ್’ ಎಂದು ಅಭಿಮಾನಿಯೋರ್ವರು ಕಾಮೆಂಟ್ ಮಾಡಿದ್ದಾರೆ. ಉಳಿದಂತೆ ಫೈಯರ್, ಲವ್, ಹಾರ್ಟ್ ಎಮೋಜಿಗಳೊಂದಿಗೆ ಸೂಪರ್ ಬಾಸ್, ಅಪ್ಪು ಬಾಸ್, ಯುವ ಬಾಸ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಫೋಟೋ ವಿಡಿಯೋಗಳು ದೊಡ್ಮನೆ ಫ್ಯಾನ್ಸ್ನ ಮೆಚ್ಚುಗೆ ಸಂಪಾದಿಸಿದೆ.

Leave a Reply

Your email address will not be published. Required fields are marked *